Saturday, June 6, 2026
Homeಅಪರಾಧಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಎಸಿಬಿ ದಾಳಿ- ಮೂವರು ಅರೆಸ್ಟ್...! ಗುರುಪ್ರಸಾದ್ ಮಂಗಳೂರು ನಿವಾಸದ...

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಎಸಿಬಿ ದಾಳಿ- ಮೂವರು ಅರೆಸ್ಟ್…! ಗುರುಪ್ರಸಾದ್ ಮಂಗಳೂರು ನಿವಾಸದ ಮೇಲೂ ದಾಳಿ

- Advertisement -
- Advertisement -

ಉಡುಪಿ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಎಂಜಿನಿಯರ್ ಗುರುಪ್ರಸಾದ್, ಪ್ರಾಧಿಕಾರ ಅಧಿಕಾರಿಗಳಾದ ನಯಿಮಾ ಸಯೀದ್ ಹಾಗೂ ಪ್ರಸಾದ್ ಇವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದುಕೊಂಡಿದೆ.

ನಗರದ ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ, ಎಸಿಬಿ ಎಸ್.ಪಿ ಸೈಮನ್, ಡಿವೈಎಸ್ ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ಎಸಿಬಿ ಎಸ್ ಐ ಸತೀಶ್, ರಫೀಕ್ ಎಂ ಈ ದಾಳಿ ನಡೆದಿದೆ. ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರ ಎಂಜಿನಿಯರ್ ಗುರುಪ್ರಸಾದ್ ಅವರಿಂದ 2.50 ಲಕ್ಷ ರೂ. ವಶಕ್ಕೆ ಪಡೆದಿದೆ.

ಇನ್ನು ಗುರುಪ್ರಸಾದ್ ಅವರ ಮಂಗಳೂರಿನ ಕೊಟ್ಟಾರ ಸಾಗರ್ ಪೊರ್ಟ್ ರೋಡ್ ನಲ್ಲಿರುವ ಮನೆ ಮೇಲೆ ಇಂದು ಸಂಜೆ ಮಂಗಳೂರು ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!