Friday, June 5, 2026
Homeಅಪರಾಧಮಂಗಳೂರು, ಉಡುಪಿಯಲ್ಲಿ ಎಸಿಬಿ ದಾಳಿ

ಮಂಗಳೂರು, ಉಡುಪಿಯಲ್ಲಿ ಎಸಿಬಿ ದಾಳಿ

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ 9 ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ ಮುಟ್ಟಿಸಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ದಕ್ಷಿಣ ಕನ್ನಡ‌ ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ. ಶ್ರೀಧರ್ ಮನೆ ಮೇಲೆ ದಾಳಿ‌ ನಡೆಸಲಾಗಿದೆ.

ಮಂಗಳೂರು ನಗರದಲ್ಲಿರುವ ಶ್ರೀಧರ್ ನಿವಾಸ ‌ಮತ್ತು ಕಚೇರಿಯಲ್ಲಿ ಹುಡುಕಾಟ ನಡೆಸಲಾಗಿದೆ. ಮಂಗಳೂರು ಎಸಿಬಿ ಎಸಿಪಿ ಎಸ್ಪಿ ಮತ್ತು ತಂಡದಿಂದ ದಾಖಲೆ ಪತ್ರ ಸಂಗ್ರಹ ನಡೆಸಲಾಗಿದೆ.‌ ಉಡುಪಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ಇಇ ಕೃಷ್ಣ ಹೆಬ್ಸರ್ ಅವರಿಗೂ ಎಸಿಬಿ ದಾಳಿಯ ಬಿಸಿ ಮುಟ್ಟಿದೆ. ಮನೆ ಮತ್ತು ಕಚೇರಿಯಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆದಿದೆ.

- Advertisement -

Latest News

error: Content is protected !!