Thursday, June 4, 2026
Homeಕರಾವಳಿಬೆಳ್ತಂಗಡಿ: ಉಜಿರೆ ಸರ್ಕಲ್‌ ನಲ್ಲಿ ಸರಕಾರಿ ಬಸ್ ಸಮಸ್ಯೆ ವಿರುದ್ಧ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತರ ಮೇಲೆ...

ಬೆಳ್ತಂಗಡಿ: ಉಜಿರೆ ಸರ್ಕಲ್‌ ನಲ್ಲಿ ಸರಕಾರಿ ಬಸ್ ಸಮಸ್ಯೆ ವಿರುದ್ಧ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಮುಂಡಾಜೆಯಲ್ಲಿ ಜ.28 ರಂದು ನಡೆದ ಬಸ್ ಅಪಘಾತದ ವಿಚಾರದಲ್ಲಿ ಉಜಿರೆ ಸರ್ಕಲ್‌ ನಲ್ಲಿ ಜ.29 ರಂದು ಬೆಳಗ್ಗೆ ನಡೆದ ಎಬಿವಿಪಿ ನೇತೃತ್ವದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಪಟ್ಟ ಇಲಾಖೆಯಿಂದ ಮನುಮತಿ ಇಲ್ಲದೆ ಪ್ರತಿಭಟನೆ,ಗುಂಪು ಸೇರಿ ಅಕ್ರಮ ಕೂಟ ಮಾಡಿದ ಎಬಿವಿಪಿ ಕಾರ್ಯಕರ್ತರಾದ ಪ್ರಾರ್ಥನ್ , ಶಿವಶಂಕರ್, ತೀಕ್ಷಿತ್ ದಿಡುಪೆ, ಜೀವನ್, ಚಿತ್ತಾರ್,ಕವನ್,ಶಿವಪ್ರಸಾದ್ ,ಮಹಿಕ್, ಯಶಸ್, ಸುವಿತ್ ಶೆಟ್ಟಿ ಮತ್ತು ಇತರರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರುಳೀಧರ್ ನಾಯ್ಕ್ ಜ.29 ರಂದು ನೀಡಿದ ದೂರಿನ ಮೇರೆಗೆ 31(0) ,103(2), 189(2),285 ಜೊತೆಗೆ 190 BNS act ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!