Thursday, June 4, 2026
Homeಕರಾವಳಿವಿಟ್ಲದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಮ

ವಿಟ್ಲದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಮ

- Advertisement -
- Advertisement -

ವಿಟ್ಲ: ಪ್ರಕರಣಯೊಂದಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಗೆ ಹಾಜರಾಗದೇ  ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಪೆರುವಾಯಿ ಗ್ರಾಮದ ಕಿನಿಯರಪಾಲು ನಿವಾಸಿ ಸುಧೀರ್ ಕುಮಾರ್ (34) ಬಂಧಿತ ಆರೋಪಿ.

ಮರಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಾರಂಟ್ ಅರೆಸ್ಟ್ ಹೊರಡಿಸಲಾಗಿತ್ತು.ಅದರಂತೆ  ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಅವರ ಸೂಚನೆ ಮೇರೆಗೆ, ಎಸ್ಸೈ ಗಳಾದ ಕಾರ್ತಿಕ್ ಮತ್ತು ವಿದ್ಯಾ ಕೆ, ಸಿಬ್ಬಂದಿ ಅಡ್ಯನಡ್ಕ ಎಂಬಲ್ಲಿ ಸುಧೀರ್ ಕುಮಾರ್ ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!