Thursday, June 4, 2026
Homeಕರಾವಳಿಮಂಗಳೂರಿನಲ್ಲಿ ವಶಪಡಿಸಿಕೊಂಡ ಚಾಕಲೇಟ್ ಗಳಲ್ಲಿ ಗಾಂಜಾ ಅಂಶವಿರೋದು ದೃಢ; ಇಬ್ಬರು ಆರೋಪಿಗಳ ಬಂಧನ

ಮಂಗಳೂರಿನಲ್ಲಿ ವಶಪಡಿಸಿಕೊಂಡ ಚಾಕಲೇಟ್ ಗಳಲ್ಲಿ ಗಾಂಜಾ ಅಂಶವಿರೋದು ದೃಢ; ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ದ ಎರಡು ಅಂಗಡಿಗಳಿಂದ ವಶ ಪಡಿಸಿಕೊಳ್ಳಲಾಗಿದ್ದ ಬಾಂಗ್‌ ಚಾಕಲೆಟ್‌ಗಳಲ್ಲಿ ಗಾಂಜಾ ಅಂಶ ಇರುವುದು ದೃಢಪಟ್ಟಿರೋದರಿಂದ, ಅದನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ವಿ.ಟಿ. ರೋಡ್‌ನ‌ ಮನೋಹರ ಶೇಟ್ (49) ಮತ್ತು ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ (45) ಬಂಧಿತರು.

ಜು. 19ರಂದು ಮಂಗಳೂರು ನಗರದ ಉತ್ತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಪೂಜಾ ಪ್ಯಾಲೇಸ್‌ ಕಟ್ಟಡದಲ್ಲಿರುವ ವೈಭವ್‌ ಪೂಜಾ ಸೇಲ್ಸ್‌ ಎಂಬ ಅಂಗಡಿಗೆ ತಾಗಿ ಅದರ ಮಾಲೀಕ ಮನೋಹರ್‌ ಶೇಟ್‌ ಮಾರಾಟ ಮಾಡುತ್ತಿದ್ದ 48,000 ರೂ. ಮೌಲ್ಯದ ತಲಾ 40 ಬಾಂಗ್‌ ಚಾಕೊಲೆಟ್‌ ತುಂಬಿರುವ 300 ಸ್ಯಾಚೆಟ್‌ಗಳನ್ನು ಮತ್ತು 592 ಬಿಡಿ ಚಾಕಲೆಟ್‌ಗಳು ಸೇರಿದಂತೆ ಒಟ್ಟು 12,592 ಬಾಂಗ್‌ ಚಾಕಲೆಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಅಲ್ಲದೇ ಅದೇ ದಿನ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್‌ ಬಳಿ ಗೂಡಂಗಡಿಯಲ್ಲಿ ಬಾಂಗ್‌ ಮಿಶ್ರಿತ ಚಾಕೊಲೆಟನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೆಚನ್‌ ಎಂಬಾತನ ವಶದಿಂದ 5,500 ರೂ. ಮೌಲ್ಯದ ಬಾಂಗ್‌ ಚಾಕೊಲೆಟ್‌ಗಳನ್ನು ವಶಪಡಿಸಿಕೊಂಡಿದ್ದರು.

ಆ ಚಾಕೊಲೆಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಅದರಲ್ಲಿ ಗಾಂಜಾ ಅಂಶವಿರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದರಿಂದ ಆರೋಪಿತರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾ ಲಯವು ಆರೋಪಿತರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

- Advertisement -

Latest News

error: Content is protected !!