Thursday, June 4, 2026
Homeಕರಾವಳಿಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳ್ಳತನ

ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳ್ಳತನ

- Advertisement -
- Advertisement -

ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಬ್ಯಾಗ್ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಬ್ಯಾಗ್ ನಲ್ಲಿದ್ದ ಹಣ ಮತ್ತು ದಾಖಲೆಪತ್ರಗಳನ್ನು ಕಳ್ಳತನವಾಗಿದೆ.

ಮೂಲತಃ ಮುಂಬೈಯವರಾಗಿರುವ ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿದ್ದ ಎಲಿಜಬೆತ್‌ಗೆ ಎಂಬ ಮಹಿಳೆಯ ಬ್ಯಾಗ್ ಕಳ್ಳತವಿಗದ್ದು, ಅದರಲ್ಲಿ 15 ಸಾವಿರ ರೂ ನಗದು, ಎಟಿಎಂ, ಆಧಾರ್‌, ಪಾನ್‌ಕಾರ್ಡ್‌ ಮತ್ತಿತರ ದಾಖಲೆ ಪತ್ರಗಳಿದ್ದವು.

ಆರೋಪಿಗಳು ಇವೆಲ್ಲವನ್ನು ತೆಗೆದು ಬ್ಯಾಗ್‌ ಎಸೆದು ಪರಾರಿಯಾಗಿದ್ದಾರೆ.

ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮುಂಬಯಿಗೆ ತೆರಳುವ ರೈಲಿಗೆ ಆ. 4ರಂದು ಸಂಜೆ 5.30ಕ್ಕೆ ಎಲಿಜೆಬೆತ್‌ ಮತ್ತವರ ಸಹೋದರರು ಹತ್ತಿದ್ದರು. ರಾತ್ರಿ ಸುಮಾರು 10ಕ್ಕೆ ಇಬ್ಬರು ನಿದ್ದೆಗೆ ಜಾರಿದ್ದು, ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್‌ ಕಳವಾಗಿತ್ತು. ಹುಡುಕಾಡಿದಾಗ ಬ್ಯಾಗ್‌ ರೈಲಿನ ಬೋಗಿಯೊಂದರ ಟಾಯ್ಲೆಟ್‌ನಲ್ಲಿ ಪತ್ತೆಯಾಗಿದೆ. ಮಹಿಳೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!