Friday, June 5, 2026
Homeತಾಜಾ ಸುದ್ದಿಸವಣೂರು: ರಾಷ್ಟ್ರೀಯ ಕ್ರೀಡಾ ದಾಖಲೆ ಬರೆದ ಅಭಿಷೇಕ್ ಎನ್. ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

ಸವಣೂರು: ರಾಷ್ಟ್ರೀಯ ಕ್ರೀಡಾ ದಾಖಲೆ ಬರೆದ ಅಭಿಷೇಕ್ ಎನ್. ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

- Advertisement -
- Advertisement -

ಸವಣೂರು: ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2019 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಕಡಬ ತಾಲೂಕಿನ ಸವಣೂರಿನ ನಡುಬೈಲು ನಿವಾಸಿ ಅಭಿಷೇಕ್ ಎನ್ ಶೆಟ್ಟಿ ಭಾಜನರಾಗಿದ್ದಾರೆ.

ಮೂಲತಃ ಇವರು ಕಡಬ ತಾಲೂಕಿನ ಸವಣೂರು ನಡುಬೈಲಿನ ಜಗನ್ನಾಥ ಶೆಟ್ಟಿ ಹಾಗೂ ತುಳಸಿನಿ ಅವರ ಪುತ್ರರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ನಂತರ ಪ್ರೌಢ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢ ಶಾಲೆಯಲ್ಲಿ ಮುಗಿಸಿದ್ದರು. ನಂತರ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ

ಪ್ರಸ್ತುತ ರೈಲ್ವೇ ಇಲಾಖೆ ಉದ್ಯೋಗಿಯಾಗಿರುವ ಇವರು ಡೆಕತ್ಲಾಣ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಹೆಮ್ಮೆ ತಂದಿದ್ದರು. ಇಂದು ಇವರು ಬೆಂಗಳೂರಿನಲ್ಲಿ ಏಕಲವ್ಯ ಪ್ರಶಸ್ತಿ ಸ್ವೀಕರಿಸಿದರು. ಇನ್ನು ಇವರ ಸಾಧನೆಗಳು ಅಪಾರವಾಗಿದೆ. 2019 ನೇ ಸಾಲಿನ ಏಕಲವ್ಯ ಪ್ರಶಸ್ತಿ ಇವರ ಮುಡಿಗೆರಿರುವುದು ಕಡಬ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

- Advertisement -

Latest News

error: Content is protected !!