Monday, June 30, 2025
Homeಮನರಂಜನೆಅಭಿಷೇಕ್ ಬಚ್ಚನ್ ಕೋವಿಡ್ ವರದಿ ನೆಗೆಟಿವ್; ಶೀಘ್ರದಲ್ಲೇ ಡಿಸ್ಚಾರ್ಜ್

ಅಭಿಷೇಕ್ ಬಚ್ಚನ್ ಕೋವಿಡ್ ವರದಿ ನೆಗೆಟಿವ್; ಶೀಘ್ರದಲ್ಲೇ ಡಿಸ್ಚಾರ್ಜ್

spot_img
- Advertisement -
- Advertisement -

ಮುಂಬೈ : ಕೊರೊನಾ ಸೋಂಕಿಗೆ ತುತ್ತಾಗಿ ಕಳೆದ 25ಕ್ಕೂ ಹೆಚ್ಚು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿ ಕಾಲ ಕಳೆದ ಅಭಿಷೇಕ್​ ಬಚ್ಚನ್​ ಇದೀಗ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಅವರ ಕರೊನಾ ವರದಿ ನೆಗೆಟಿವ್ ಬಂದಿದ್ದು, ಶೀಘ್ರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಅಮಿತಾಬ್​ ಬಚ್ಚನ್​ ಕರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದರು. ಮನೆಯಲ್ಲಿಯೂ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದರು. ಅಷ್ಟೇ ಅಲ್ಲ ಆದಷ್ಟು ಬೇಗ ಅಭಿಷೇಕ್​ ಗುಣಮುಖನಾಗಿ ಆಚೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಅದರಂತೆ ಇದೀಗ ಅಭಿಷೇಕ್​ ಕೋವಿಡ್ ವರದಿ ನೆಗೆಟಿವ್​ ಬಂದಿದ್ದು ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

 

- Advertisement -
spot_img

Latest News

error: Content is protected !!