Friday, May 17, 2024
Homeತಾಜಾ ಸುದ್ದಿಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಬರೋ ಸಾಧ್ಯತೆ ಹೆಚ್ಚಿದೆ ಗೊತ್ತಾ?

ಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಬರೋ ಸಾಧ್ಯತೆ ಹೆಚ್ಚಿದೆ ಗೊತ್ತಾ?

spot_img
- Advertisement -
- Advertisement -

ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಜೀವನ ನಿರ್ವಹಣೆಗಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಸಾರ್ವಜನಿಕ ಬಸ್ ಹಾಗೂ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

ನ್ಯೂಯಾರ್ಕ್ ನಲ್ಲಿ 5 ತಿಂಗಳ ನಂತ್ರ ರೈಲು ಪ್ರಯಾಣ ಶುರುವಾಗಿದೆ. ಆದ್ರೆ ಶೇಕಡಾ 20ರಷ್ಟು ಮಂದಿ ಮಾತ್ರ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಸಹಾಯದಿಂದ ನಡೆದ ಸಮೀಕ್ಷೆಯೊಂದರಲ್ಲಿ ಸಾರ್ವಜನಿಕರ ವಾಹನಗಳಿಂದ ಸೋಂಕು ಹರಡುವ ಅಪಾಯ ಹೆಚ್ಚಿಲ್ಲ ಎನ್ನಲಾಗಿದೆ. ನಗರಗಳಲ್ಲಿ ಮೇ ಮತ್ತು ಜುಲೈ ನಡುವೆ 386 ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೇ ಪ್ರಕರಣಗಳು ಸಾರ್ವಜನಿಕ ಸಾರಿಗೆ ನಂಟು ಹೊಂದಿಲ್ಲ.

ಆದ್ರೆ ಇದೇ ಸರಿ ಎನ್ನಲು ಸಾಧ್ಯವಿಲ್ಲ. ದಿನ ದಿನಕ್ಕೂ ಹೆಚ್ಚಾಗ್ತಿರುವ ಕೊರೊನಾ ಸಂಖ್ಯೆಯಿಂದಾಗಿ ಎಚ್ಚರಿಕೆ ವಹಿಸುವುದು ಮುಖ್ಯ. ಸೀಟುಗಳನ್ನು ನಿರಂತರ ಸ್ಯಾನಿಟೈಜರ್ ಮಾಡಲಾಗ್ತಿದೆ. ರೈಲು, ಬಸ್ ಏರುವ ಪ್ರಯಾಣಿಕರಿಗೆ ಉಷ್ಣತೆ ಪರೀಕ್ಷೆ ನಡೆಯುತ್ತಿದೆ. ಆದ್ರೆ ಈ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಅದ್ರ ಪ್ರಕಾರ ಕೊರೊನಾ ಸೋಂಕಿತ ಕುಳಿತ ಸೀಟಿನಿಂದ ಮೂರು ಸೀಟು ದೂರ ಕುಳಿತಲ್ಲಿ ಶೇಕಡಾ 0.32ರಷ್ಟು ಅಪಾಯವಿರುತ್ತದೆ. ರೋಗಿಯ ಪಕ್ಕದಲ್ಲೇ ಕುಳಿತಿದ್ರೆ ಸೋಂಕು ಹರಡುವ ಪ್ರಮಾಣ ಶೇಕಡಾ 3.5ರಷ್ಟಿರುತ್ತದೆ.

ಈ ಅಧ್ಯಯನ 3 ಗಂಟೆಗಳಿಗಿಂತ ಕಡಿಮೆ ದೂರದಲ್ಲಿರುವ ಪ್ರಯಾಣಿಕರ ಮೇಲೆ ಮಾಡಲಾಗಿದೆ. ಪ್ರಯಾಣವು 3 ಗಂಟೆ ಅಥವಾ ಹೆಚ್ಚಿನದಾಗಿದ್ದರೆ ಫಲಿತಾಂಶಗಳು ವಿಭಿನ್ನವಾಗಿರುತ್ತದೆ. ಪ್ರತಿ ಗಂಟೆಯ ಪ್ರಯಾಣದೊಂದಿಗೆ ಕೊರೊನಾ ಸೋಂಕಿನ ಅಪಾಯವು ಶೇಕಡಾ 1.3ರಷ್ಟು ಹೆಚ್ಚಾಗುತ್ತದೆ.

 

- Advertisement -
spot_img

Latest News

error: Content is protected !!