Thursday, June 4, 2026
Homeಮನರಂಜನೆಫೋಟೋ ಬೇಕು, ಆದರೆ ನನ್ನಲ್ಲಿ ಮೊಬೈಲ್ ಇಲ್ಲವೆಂದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಮಾಡಿದ್ದೇನು...

ಫೋಟೋ ಬೇಕು, ಆದರೆ ನನ್ನಲ್ಲಿ ಮೊಬೈಲ್ ಇಲ್ಲವೆಂದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಮಾಡಿದ್ದೇನು ಗೊತ್ತಾ?!

- Advertisement -
- Advertisement -

ಬೆಂಗಳೂರು: ಸಾಮಾನ್ಯವಾಗಿ ಜನಪ್ರಿಯ ನಟರನ್ನು ಕಂಡಾಗ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬೀಳುವುದು ಸಾಮಾನ್ಯ. ಆದರೆ ತಮ್ಮನ್ನು ಭೇಟಿಯಾದ ಅಭಿಮಾನಿ ಸೆಲ್ಫೀ ಬೇಕೆಂದಾಗ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮಾಡಿದ್ದೇನು ಗೊತ್ತಾ?

ಕಾರಿನಲ್ಲಿ ತೆರಳುವಾಗ ತಮಗೆ ಎದುರಾದ ಅಭಿಮಾನಿ ಒಂದೇ ಒಂದು ಸೆಲ್ಫೀ ಬೇಕೆಂದು ಕೇಳಿದ್ದರಂತೆ. ಆದರೆ ಆ ಅಭಿಮಾನಿ ಬಳಿ ಆಗ ಫೋನ್ ಇರಲಿಲ್ಲ. ಹೀಗಾಗಿ ಅಭಿಷೇಕ್ ತಮ್ಮ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದು ಅದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ಇನ್ನು ಈ ಫೋಟೋದಲ್ಲಿ ಅಭಿಷೇಕ್ ಹಾಗೂ ಆ ಅಭಿಮಾನಿ ಮಾಸ್ಕ್ ಧರಿಸಿರಲಿಲ್ಲ. ಅದಕ್ಕೂ ಅಭಿ ಸ್ಪಷ್ಟನೆ ಕೊಟ್ಟಿದ್ದು, ಆತ ಫೋಟೋ ತೆಗೆಯಲು ಬೇಕಾಗಿ ಮಾಸ್ಕ್ ತೆಗೆದಿದ್ದ. ಅಷ್ಟೇ ಅಲ್ಲದೆ, ನನ್ನ ಕಾರಿನ ಗಾಜು ತೆರೆದಿರಲಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

- Advertisement -

Latest News

error: Content is protected !!