ಕೇರಳ; ಪಿರಿಯೆಡ್ಸ್ ಹೊಟ್ಟೆನೋವಿಗೆಂದು ಟ್ಯಾಬ್ಲೆಟ್ ತಿಂದ ಯುವತಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯ ಪುಲಿವಾಲಂ ಪ್ರದೇಶದಲ್ಲಿ ನಡೆದಿದೆ.ಇಲ್ಲಿನ ಮುಸಿರಿ ತಾಲ್ಲೂಕಿನ ಹಳ್ಳಿಯೊಂದರ 18 ವರ್ಷದ ಯುವತಿಗೆ ಮುಟ್ಟಿನಿಂದಾಗಿ ತೀವ್ರ ಹೊಟ್ಟೆ ನೋವಾಗುತ್ತಿತ್ತು.
ಆಗಸ್ಟ್ 21ರಂದು, ಹೊಟ್ಟೆ ನೋವು ತಡೆಯಲಾರದೇ ಆಕೆ ಮಾತ್ರೆಗಳನ್ನು ಸೇವಿಸಿದ್ದಾಳೆ. ಸ್ವಲ್ಪ ಸಮಯದ ನಂತರ ಯುವತಿ ವಾಂತಿ ಮಾಡಲು ಪ್ರಾರಂಭಿಸಿದ್ದು, ಆಕೆಯ ಪೋಷಕರು ಅವಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಿ ನಂತ್ರ ಡಿಸ್ಚಾರ್ಜ್ ಮಾಡಲಾಗಿದೆ.
ಮನೆಗೆ ಮರಳಿದ ನಂತ್ರ ಯುವತಿ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಯನ್ನ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಯುವತಿ ಇಂಜಿನಿಯರಿಂಗ್ ಓದಲು ಪ್ರವೇಶ ಪಡೆಯಲು ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಕಾಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.