Thursday, June 4, 2026
Homeಅಪರಾಧಪೋಷಕರು ಫೋಟೋಶೂಟ್​​ಗೆ ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

ಪೋಷಕರು ಫೋಟೋಶೂಟ್​​ಗೆ ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು: ಫೋಟೋಶೂಟ್ ಮಾಡಿಕೊಳ್ಳಲು ಮಾಲ್ ಗೆ ಹೋಗುವುದಾಗಿ ಕೇಳಿಕೊಂಡ ಮಗಳನ್ನು ಪೋಷಕರು ತಡೆದಿದ್ದಕ್ಕಾಗಿ ಮನನೊಂದ ಯುವತಿಯು ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಧಾಮನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿದ ಯುವತಿ ವರ್ಷಿಣಿ (21). ಈಕೆ ವರ್ಷಿಣಿ ನಿನ್ನೆ(ಜ. ೦1) ಮಾಲ್‌ಗೆ ಹೋಗಿ ಫೋಟೋಶೂಟ್ ಮಾಡಿಸಬೇಕು ಎಂದು ರೆಡಿಯಾಗಿದ್ದಳು. ಆದರೆ ಪೋಷಕರು ಮಾಲ್‌ಗೆ ಹೋಗಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ನೊಂದ ವರ್ಷಿಣಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಈಕೆ ಜಯನಗರದ ಕಾಲೇಜ್ ಒಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!