Friday, June 27, 2025
Homeತಾಜಾ ಸುದ್ದಿತನ್ನ ಮದುವೆ ಪ್ರಪೋಸಲ್ ಗಳನ್ನು ತಪ್ಪಿಸುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

ತನ್ನ ಮದುವೆ ಪ್ರಪೋಸಲ್ ಗಳನ್ನು ತಪ್ಪಿಸುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

spot_img
- Advertisement -
- Advertisement -

ಕೇರಳ : ತನಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳನ್ನು ತಪ್ಪಿಸುತ್ತಿದ್ದ ಅನ್ನೋ ಕಾರಣಕ್ಕೆ ಯುವಕನೊಬ್ಬ ವ್ಯಕ್ತಿಯೊಬ್ಬನ ಅಂಗಡಿಯನ್ನೇ ಧ್ವಂಸಗೊಳಿಸಿದ ಘಟನೆ ಕೇರಳದ ಕನ್ನೂರು ಜಿಲ್ಲೆಯ ಚೆರೂಪುಜಾ ಎಂಬಲ್ಲಿ ನಡೆದಿದೆ.

30 ವರ್ಷದ ಅಲ್ಬಮಿನ್ ನೆರೆಮನೆ ವ್ಯಕ್ತಿಯ ಅಂಗಡಿಯನ್ನ ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾನೆ. ಅಂಗಡಿ ಮಾಲೀಕ ನೀಡಿದ ದೂರಿನ ಅನ್ವಯ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಂಗಡಿ ಧ್ವಂಸಕ್ಕೂ ಮುನ್ನ ಫೇಸ್‍ಬುಕ್ ನಲ್ಲಿ ಅಲ್ಬಮಿನ್ ವೀಡಿಯೋ ಶೇರ್ ಮಾಡಿಕೊಂಡಿದ್ದನು.

ಈ ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಜೂಜಾಟ ಮತ್ತು ಮದ್ಯ ಮಾರಾಟ ಸೇರಿದಂತೆ ಚಟುವಟಿಕೆಗಳನ್ನ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವಕರು ಇದರಿಂದ ಬೇಸತ್ತಿದ್ದಾರೆ. ನಾವು ಪೊಲೀಸ್, ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ತಿಳಿಸಿದ್ರೂ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಈ ಹಿನ್ನೆಲೆ ಅಂಗಡಿಯನ್ನ ಧ್ವಂಸಗೊಳಿಸುತ್ತೇನೆ ಎಂದು ಹೇಳಿದ್ದಾನೆ.

ಯುವಕ ಅಂಗಡಿಗೆ ಹಾನಿ ಮಾಡಿದ್ದು ತಪ್ಪು. ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಬಂಧಿತ ಯುವಕ ಆರೋಪಿಸಿದ್ದಾನೆ. ಆದ್ರೆ ಅಂಗಡಿ ಮಾಲೀಕ ಅಲ್ಬಮಿನ್ ಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳನ್ನು ತಡೆಯುತ್ತಿದ್ದರಿಂದ ಅಲ್ಬಮಿನ್ ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!