- Advertisement -
![]()
- Advertisement -
ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್‌ನ ಪಟ್ಟಿಬಾವು ಹೊಳೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಅಜಯ್ (21). ಈತನು ವಾಲಿಬಾಲ್ ಆಡಲೆಂದು ಸ್ನೇಹಿತರೊಂದಿಗೆ ಕೆ.ಸಿ. ರೋಡ್ ಗೆ ತೆರಳಿದ್ದನು. ವಾಲಿಬಾಲ್ ಆಡಿದ ಬಳಿಕ ಸ್ನೇಹಿತರೆಲ್ಲರೂ ಹೊಳೆಯ ದಂಡೆಯಲ್ಲಿ ಕುಳಿತಿದ್ದು, ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಸ್ಥಳೀಯರೊಬ್ಬರು ಮೃತದೇಹವನ್ನು ಹೊರತೆಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


