Thursday, June 4, 2026
Homeಕರಾವಳಿಹೃದಯಾಘಾತದಿಂದ ಸುರತ್ಕಲ್ ಮೂಲದ ಯುವಕ ಸೌದಿ ಅರೆಬಿಯಾದಲ್ಲಿ ನಿಧನ

ಹೃದಯಾಘಾತದಿಂದ ಸುರತ್ಕಲ್ ಮೂಲದ ಯುವಕ ಸೌದಿ ಅರೆಬಿಯಾದಲ್ಲಿ ನಿಧನ

- Advertisement -
- Advertisement -

ಸುರತ್ಕಲ್‌: ಸೌದಿ ಅರೆಬಿಯಾದ ಅಲ್ ಕೋಬರ್ ನಲ್ಲಿ ಕರಾವಳಿ ಮೂಲದ ಯುವಕನೋರ್ವ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.

ಇರ್ಷಾದ್ (33) ಮೃತ ವ್ಯಕ್ತಿ. ಈತ ಜೋಕಟ್ಟೆ ಕೆಬಿಎಸ್ ನಿವಾಸಿ. ಜೋಕಟ್ಟೆ ಕೆಬಿಎಸ್ ನಿವಾಸಿ ಅಬ್ದುಲ್ ರಝಾಕ್ ಅವರ ಮಗ ಇರ್ಶಾದ್ 7ವರ್ಷಗಳಿಂದ ಸೌದಿ ಅರೆಬಿಯಾದ ಅಲ್ ಕೋಬರ್‌ನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ ತಾಯ್ನಾಡಿಗೆ ಬಂದು ಸೌದಿ ಅರೆಬಿಯಾಕ್ಕೆ ತೆರಳಿದ್ದರು.

ಆದರೆ ಗುರುವಾರ ಬೆಳಗ್ಗೆ ಇರ್ಶಾದ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಅವರ ಸ್ನೇಹಿತರು ತಕ್ಷಣ ಅಲ್ ಕೋಬರ್ ನ ಅಲ್ ಸಲಾಮ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎನ್ನಲಾಗಿದೆ.

ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂದು ಅವರ ಕುಟುಂಬ ಮೂಲ ಮಾಹಿತಿ ನೀಡಿದೆ. ಮೃತ ಇರ್ಶಾದ್ ವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!