Saturday, June 6, 2026
Homeಅಪರಾಧಪ್ರಿಯತಮೆ ಔಟಿಂಗ್ ಬರಲಿಲ್ಲವೆಂದು ಪಿಜಿಗೆ ಕಲ್ಲೆಸೆದ ಪ್ರಿಯಕರ; ಪ್ರಿಯಕರನಿಗೆ ಬಿತ್ತು ಸಾರ್ವಜನಿಕರಿಂದ ಧರ್ಮದೇಟು

ಪ್ರಿಯತಮೆ ಔಟಿಂಗ್ ಬರಲಿಲ್ಲವೆಂದು ಪಿಜಿಗೆ ಕಲ್ಲೆಸೆದ ಪ್ರಿಯಕರ; ಪ್ರಿಯಕರನಿಗೆ ಬಿತ್ತು ಸಾರ್ವಜನಿಕರಿಂದ ಧರ್ಮದೇಟು

- Advertisement -
- Advertisement -

ಮಂಗಳೂರು: ಯುವಕನೊಬ್ಬ ತನ್ನ ಪ್ರೇಯಸಿ ಔಟಿಂಗ್ ಬರಲಿಲ್ಲವೆಂದು ಆಕೆ ಕೆಲಸ ಮಾಡುತ್ತಿದ್ದ ಪಿಜಿ ಕಟ್ಟಡಕ್ಕೆ ಕಲ್ಲು ಎಸೆದ ಘಟನೆ ಮಂಗಳೂರಿನ ಖಾಸಗಿ ಕಾಲೇಜು ಮುಂಭಾಗದಲ್ಲಿ ನಡೆದಿದೆ.

ಕಲ್ಲೆಸೆದ ಪ್ರಿಯಕರ ಸುಳ್ಯ ನಿವಾಸಿ ವಿವೇಕ್ (18). ಈತ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಗುರುವಾರ ಸಂಜೆ ಔಟಿಂಗ್‌ ಬರುವಂತೆ ಕರೆ ಮಾಡಿದ್ದಾನೆ. ಆದರೆ ಔಟಿಂಗ್ ಹೋಗಲು ಯುವತಿಯು ನಿರಾಕರಿಸಿದ್ದಾಳೆ.

ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!