- Advertisement -
- Advertisement -
ಕಾಪು : ಗದ್ದೆಗೆ ದೀಪಾವಳಿ ಪ್ರಯುಕ್ತ ತುಡರ್ ಹಬ್ಬದ ಬೆಳಕು ತೋರಿಸಲು ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಕಾಪುವಿನಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟವರನ್ನು ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಎಂದು ತಿಳಿದುಬಂದಿದೆ. ಬಲೀಂದ್ರ ಪೂಜೆಯ ಪ್ರಯುಕ್ತ ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಗದ್ದೆಗೆ ಹೋಗಿದ್ದ ವೇಳೆ ಅವರಿಗೆ ವಿಷ ಜಂತು ಕಡಿದಿತ್ತು. ಮನೆಯವರು ತತ್ ಕ್ಷಣ ಅವರನ್ನು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಆತ, ಶುಕ್ರವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
- Advertisement -