Thursday, June 4, 2026
Homeಕರಾವಳಿಮಂಗಳೂರು: 'ಐಡಿಯಲ್‌ ಐಸ್‌ಕ್ರೀಂ' ಸಂಸ್ಥಾಪಕ ಪ್ರಭಾಕರ ಕಾಮತ್‌ ವಿಧಿವಶ !

ಮಂಗಳೂರು: ‘ಐಡಿಯಲ್‌ ಐಸ್‌ಕ್ರೀಂ’ ಸಂಸ್ಥಾಪಕ ಪ್ರಭಾಕರ ಕಾಮತ್‌ ವಿಧಿವಶ !

- Advertisement -
- Advertisement -

ಮಂಗಳೂರು : ಕರಾವಳಿಯಾದ್ಯಂತ ಹೆಸರುವಾಸಿಯಾಗಿರುವ ಐಡಿಯಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ಎಸ್‌. ಪ್ರಭಾಕರ ಕಾಮತ್‌ (79) ಶನಿವಾರ ಮುಂಜಾನೆ 3.30 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರೆ.

ಅ.28 ರಂದು ಗುರುವಾರ ರಾತ್ರಿ 8.45ರ ಸುಮಾರಿಗೆ ಪ್ರಭಾಕರ ಕಾಮತ್‌ ಅವರು ಬಿಜೈ ಕಾಪಿಕಾಡ್‌ನ‌ 1ನೇ ಅಡ್ಡರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಕಡೆಯಿಂದ ಬಿಜೈ ಕಾಪಿಕಾಡ್‌ ಕಡೆಗೆ ಅತಿ ವೇಗದಿಂದ ಬಂದ ಸ್ಕೂಟರ್‌ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಕಾಮತ್‌ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.ಈ ಪ್ರಕರಣ ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!