Tuesday, June 9, 2026
Homeಕರಾವಳಿಉಡುಪಿಉಡುಪಿ: ಲೂಡೋ ಆಡ್ತಿದ್ದ ವೇಳೆ ಕುಸಿದುಬಿದ್ದು ಯುವಕ ಸಾವು

ಉಡುಪಿ: ಲೂಡೋ ಆಡ್ತಿದ್ದ ವೇಳೆ ಕುಸಿದುಬಿದ್ದು ಯುವಕ ಸಾವು

- Advertisement -
- Advertisement -

ಉಡುಪಿ: ಮೊಬೈಲ್‌ನಲ್ಲಿ ಲೂಡೋ ಆಡ್ತಿದ್ದ ವೇಳೆಯೇ ಕುಸಿದುಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಯರಾಮ (30) ಮೃತಪಟ್ಟವರು. ಲೂಡೋ ಆಡುತ್ತಾ ಕುಳಿತಿದ್ದ ಇವರು ಒಮ್ಮೆಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದ್ರೆ ವೈದ್ಯರು, ಜಯರಾಮ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!