Friday, June 5, 2026
Homeತಾಜಾ ಸುದ್ದಿಅಮ್ಮ ಚಾಕ್ಲೇಟ್‌ ಕದ್ದಿದ್ದಾಳೆ: ಅವಳನ್ನು ನೀವು ಜೈಲಿಗೆ ಹಾಕಿ: ಪೊಲೀಸರಿಗೆ ದೂರು ನೀಡಿದ ಮೂರು ವರ್ಷದ...

ಅಮ್ಮ ಚಾಕ್ಲೇಟ್‌ ಕದ್ದಿದ್ದಾಳೆ: ಅವಳನ್ನು ನೀವು ಜೈಲಿಗೆ ಹಾಕಿ: ಪೊಲೀಸರಿಗೆ ದೂರು ನೀಡಿದ ಮೂರು ವರ್ಷದ ಬಾಲಕ

- Advertisement -
- Advertisement -

ಭೋಪಾಲ್: ಅಮ್ಮ ಚಾಕ್ಲೇಟ್‌ ಕದ್ದಿದ್ದಾಳೆಂದು ಮೂರು ವರ್ಷದ ಪುಟ್ಟ ಬಾಲಕನೊಬ್ಬ ಅಮ್ಮನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಗ್ಧತೆಗೆ ನೆಟ್ಟಿಗರು ಕೂಡ ಮಾರು ಹೋಗಿದ್ದಾರೆ.

ಈ ಪ್ರಕರಣವು ಮಧ್ಯಪ್ರದೇಶದ ಬುರ್ಹಾನ್‍ಪುರ ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾನೆ. ಮಹಿಳಾ ಪೊಲೀಸ್ ಒಬ್ಬರ ಬಳಿ ಬಂದ ಬಾಲಕ, ನನ್ನ ಅಮ್ಮ ನನ್ನನ್ನು ಚಾಕ್ಲೇಟ್ ತಿನ್ನಲು ಬಿಡುತ್ತಿಲ್ಲ. ಅಲ್ಲದೇ ಆಕೆ ನನ್ನಲ್ಲಿದ್ದ ಚಾಕ್ಲೇಟ್ ಎಲ್ಲವನ್ನೂ ಕದ್ದಿದ್ದಾಳೆ. ಅದ್ಕೆ ಅಮ್ಮನನ್ನ ನೀವು ಜೈಲಿಗೆ ಹಾಕಿ ಎಂದು ದೂರಿನಲ್ಲಿ ತಿಳಿಸಿದ್ದಾನೆ.

- Advertisement -

Latest News

error: Content is protected !!