Friday, June 5, 2026
Homeಕರಾವಳಿಮಂಗಳೂರುಕಡಬ: ಫ್ಯಾನಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕಡಬ: ಫ್ಯಾನಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಕಡಬ: ಯುವಕನೋರ್ವ ತನ್ನ ಮನೆಯಲ್ಲಿ  ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೂಜಿಬಾಳ್ತಿಲ ಗ್ರಾಮದಿಂದ ನ.19 ರಂದು ನಡೆದಿದೆ. ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದ  ದಿ.ವಾಲ್ಟರ್ ರೋಡ್ರಿಗಸ್ ಎಂಬವರ ಪುತ್ರ  ಚೇತನ್ ಮೃತ ದುರ್ದೈವಿ.

ಪದವಿ ಮುಗಿಸಿ ಮನೆಯಲ್ಲಿ ಕೃಷಿ ಕೆಲಸ ಮಾಡಿ ಕೊಂಡಿದ್ದ ಈತ  ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.  ಈ ಬಗ್ಗೆ ವೈದ್ಯರ ಬಳಿ ಚಿಕಿತ್ಸೆ ಪಡೆದು ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಿದ್ದನು. ನ.19 ರಂದು ಶಿಕ್ಷಕಿಯಾಗಿರುವ ತಾಯಿಯನ್ನು  ತಾಯಿಯನ್ನು ಕಾಲೇಜಿನವರೆಗೆ ಬಿಟ್ಟು  ಬಂದಿದ್ದ. ತಾಯಿ ಮಧ್ಯಾಹ್ನ   ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದಾಗ  ಮನೆಯ ಮೇಲ್ಮಡಿಯ ಕೆಲಸ ಮಾಡುತ್ತಿದ್ದ ಕೆಲಸದವರಿಗೆ  ಕರೆ ಮಾಡಿ ಮಗ  ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು.

ಕೆಲಸ ಮಾಡಿಕೊಂಡಿದ್ದ   ಲೋಕೇಶ್ ರವರು ಮನೆಯ ರೂಮಿಗೆ ಬಂದಾಗ ಒಳಗಿನಿಂದ ಚಿಲಕ ಹಾಕಿಕೊಂಡು ಭದ್ರಗೊಳಿಸಿರೋದು ಗೊತ್ತಾಗಿದೆ. ಬಳಿಕ ಕಿಟಕಿ ಸಂದಿಯಿಂದ ರೂಮಿನ ಒಳಗಡೆ ನೋಡಿದಾಗ ಚೇತನ್ ರೂಮಿಗೆ ಅಳವಡಿಸಿದ ಫ್ಯಾನಿಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಚೇತನ್ ಮಾನಸಿಕ ಖಿನ್ನತೆಗೆ ಒಳಗಾದವನು ಔಷಧಿ ಸೇವಿಸುತ್ತಿದ್ದು ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ತಾಯಿ ಎಂ ಬಿ ಲಿಸಿ ಅವರು ನೀಡಿದ ದೂರಿನಂತೆ ಠಾಣಾ ಯುಡಿಆರ್‌ ನಂ: 34/2025 ಕಲಂ:194 (3) BNSS-2023. ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!