Wednesday, June 24, 2026
Homeಕರಾವಳಿಉಡುಪಿಉಡುಪಿ; ತಲೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ವ್ಯಕ್ತಿ ಸಾವು

ಉಡುಪಿ; ತಲೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಉಡುಪಿ; ತಲೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೃತರನ್ನು ಪಡುವರಿ ಗ್ರಾಮದಲ್ಲಿ ನಡೆದಿದೆ. ಪಡುವರಿ ಗ್ರಾಮದ ಬಸವನ ಕೆರೆಯ ರಾಮ ದೇವಾಡಿಗ(70) ಮೃತ ದುರ್ದೈವಿ.

ಜ.21ರಂದು ನಾಗೂರಿನ ತನ್ನ ಹೆಂಡತಿ ಮನೆಯಿಂದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸಲು ನಡೆದುಕೊಂಡು ಹೋಗುತ್ತಿದ್ದ ರಾಮ ದೇವಾಡಿಗರ ತಲೆಯ ಮೇಲೆ ಗೇರು ಮರದ ಕೊಂಬೆ ತುಂಡಾಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಜ.25ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest News

error: Content is protected !!