Monday, June 8, 2026
HomeUncategorizedಉಡುಪಿ: ನಾಗಸಾಧು ವೇಷದಲ್ಲಿ ಬಂದು ಅಂಗಡಿ ಮಾಲೀಕ ಉಂಗುರ ಎಗರಿಸಿದ ಚಾಲಾಕಿ

ಉಡುಪಿ: ನಾಗಸಾಧು ವೇಷದಲ್ಲಿ ಬಂದು ಅಂಗಡಿ ಮಾಲೀಕ ಉಂಗುರ ಎಗರಿಸಿದ ಚಾಲಾಕಿ

- Advertisement -
- Advertisement -

ಉಡುಪಿ: ವ್ಯಕ್ತಿಯೊಬ್ಬ ನಾಗಸಾಧು ವೇಷದಲ್ಲಿ ಬಂದು ಅಂಗಡಿ ಮಾಲೀಕನ ಉಂಗುರ ಎಗರಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.

ಬೈಂದೂರಿನ ಮಂಜುನಾಥ(46) ಎಂಬವರ ಅಂಗಡಿಗೆ ಡಿ.14ರಂದು ಕಪ್ಪುಬಣ್ಣದ ಬಟ್ಟೆ ಧರಿಸಿರುವ ನಾಗ ಸಾಧು ಬಂದಿದ್ದು, ಆತ ಮಂಜುನಾಥ್ ಅವರಿಗೆ ಪ್ರಸಾದ ನೀಡಿ ಒಂದು ಪವನ್ ನವರತ್ನ ಹರಳಿನ ಚಿನ್ನದ ಉಂಗುರವನ್ನು ಪ್ರಸಾದದಲ್ಲಿ ಹಾಕಿ ಅಂಗಡಿ ಡವರ್‌ನಲ್ಲಿ ಇಡುವಂತೆ ಹೇಳಿದ್ದಾನೆ. ಬಳಿಕ ಪೂಜೆ ಮಾಡಿ ಮತ್ತೆ ಉಂಗುರ ಹಾಕಿಕೊಳ್ಳುವಂತೆ ತಿಳಿಸಿ ಹೋಗಿದ್ದನು. ನಾಗಸಾಧು ಹೋದ ನಂತರ ಮಂಜುನಾಥ್ ಪ್ರಸಾದ ತೆಗೆದು ನೋಡಿದಾಗ ಉಂಗುರ ಕಳವಾಗಿರುವುದು ಗೊತ್ತಾಗಿದೆ.

ನಾಗ ಸಾಧು ಮಂಜುನಾಥ್ ಅವರನ್ನು ವಶೀಕರಣ ಮಾಡುವ ರೀತಿಯಲ್ಲಿ ನಂಬಿಸಿ ಉಂಗುರವನ್ನು ಕಳವು ಗೈದು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!