Friday, June 26, 2026
Homeತಾಜಾ ಸುದ್ದಿನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದಲೇ ಕಾರು ಚಾಲನೆ

ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದಲೇ ಕಾರು ಚಾಲನೆ

- Advertisement -
- Advertisement -

ದೇವನಹಳ್ಳಿ: ಇಲ್ಲಿನ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಕ್ಯಾಬ್‌ ಡ್ರೈವರ್‌ ನಿದ್ದೆ ಮಾಡುತ್ತಿದ್ದನ್ನು ಗಮನಿಸಿ, ಡ್ರೈವರ್‌ ಬಳಿ ಕೀ ಪಡೆದು ತಾನೇ ಕ್ಯಾಬ್‌ ಓಡಿಸಿದ ಘಟನೆ ನಡೆದಿದೆ.

ತಾಲೂಕಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಕ್ಯಾಬ್ ನಲ್ಲಿ ಸಂಚಾರಿಸುತ್ತಿದ್ದ ಮಿಲಿಂದ್‌ ಚಂದ್ವಾನಿ ಎನ್ನುವ ವ್ಯಕ್ತಿಯು ತಾನು ಪ್ರಯಾಣಿಸುತ್ತಿದ್ದ ಕ್ಯಾಬಿನ ಡ್ರೈವರ್ ನಿದ್ದೆ ಮಾಡುತ್ತಿರುವುದುನ್ನು ಗಮನಿಸಿ, ಪ್ರಯಾಣಿಕನೇ ಕ್ಯಾಬ್ ಚಲಾಯಿಸಿ ತಲುಪಬೇಕಿದ್ದ ಸ್ಥಳಕ್ಕೆ ಶನಿವಾರ ನಸುಕಿನ 3 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ನಂತರದಲ್ಲಿ ಚಾಲಕನ ಬಗ್ಗೆ ಅನುಕಂಪ ತೋರಿಸಿ, ಕ್ಯಾಬ್‌ನ ಆ್ಯಪ್‌ ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ನೀಡಿ.100 ರೂ. ಟಿಪ್ಸ್‌ ಸಹ ಕೊಟ್ಟು ಔದಾರ್ಯ ಮೆರೆದಿದ್ದಾರೆ.

ಐಐಎಂನ ಎಂಬಿಎ ಪದವೀಧರ, ಮಿಲಿಂದ್‌ ಚಂದ್ವಾನಿ ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿ ಕೊಂಡಿದ್ದು, “ಜೀವನದಲ್ಲಿ ಕೆಲವೊಮ್ಮೆ ಅಸಹಜ ಕೆಲಸಗಳನ್ನು ನಾವು ಮಾಡಬೇಕಾದ ಸಂದರ್ಭಗಳು ಒದಗಿ ಬರುತ್ತದೆ. ನಾನು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕ್ಯಾಬ್‌ ಏರಿಕೊಂಡು ಬೆಂಗಳೂರಿನೆಡೆಗೆ ಸಾಗುತ್ತಿದ್ದೆ. ಈ ಸಂದರ್ಭದಲ್ಲಿ ಕ್ಯಾಬ್‌ ಚಾಲಕ ಆಗಾಗ ನಿದ್ದೆ ಮಾಡುತ್ತಿದ್ದರು. ಹೋಗುವ ದಾರಿಯಲ್ಲಿ ನಿಲ್ಲಿಸಿ ಒಂದು ಟೀಯೊಂದಿಗೆ ಸಿಗರೆಟ್‌ ಅನ್ನು ಸೇದಿದರೂ. ಆದರೂ ಆತನ ನಿದ್ದೆ ಬಿಡುತ್ತಿರಲಿಲ್ಲ. ಇದರಿಂದಾಗಿ ನನಗೆ ತೊಂದರೆಗಳು ಹೆಚ್ಚಾಗಬಹುದೆಂದು ತಿಳಿದು, ನಾನೇ ಕ್ಯಾಬ್‌ ಚಾಲನೆ ಮಾಡುತ್ತೇನೆ ಎಂದು ಕ್ಯಾಬ್‌ ಚಾಲಕನಲ್ಲಿ ಕೇಳಿದಾಕ್ಷಣ ಆತನು ದಿಢೀರ್‌ಎಂದು ಕ್ಯಾಬ್‌ನ ಕೀ ಕೊಟ್ಟು, ಗೂಗಲ್‌ ಮ್ಯಾಪ್‌ನಲ್ಲಿ ತೊರಿಸಿದ ರೀತಿ ದಾರಿಯಲ್ಲಿ ಸಾಗಿ ನಾನು ತಲುಪುವ ಸ್ಥಳಕ್ಕ ತಲುಪಿದ್ದೇನೆ. ನಂತರ ಚಾಲಕನ ಪಕ್ಕದ ಸೀಟ್‌ನ್ನು ಹಿಂದಕ್ಕೆ ಸರಿಸಿಕೊಂಡು, ನೆಮ್ಮದಿಯಿಂದ ನಿದ್ರಿಸಿದ್ದಾನೆ. ಆತನಿಗೆ ಕ್ಯಾಬ್‌ನ ಆ್ಯಪ್‌ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ನೀಡಿ.100 ರೂ. ಟಿಪ್ಸ್‌ ಕೊಟ್ಟೆ,’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

- Advertisement -

Latest News

error: Content is protected !!