Sunday, May 5, 2024
HomeUncategorizedಮಾಣಿ : ಪ್ರಶ್ನೆ ಚಿಂತನೆಯಲ್ಲಿ ಗ್ರಾಮ ದೇವಾಲಯ ನಾಶವಾದ ಅಂಶ ಬೆಳಕಿಗೆ; ಜೀರ್ಣೋದ್ದಾರವಾಗದಿದ್ದರೆ ಮಾಣಿ ಅಭಿವೃದ್ಧಿ...

ಮಾಣಿ : ಪ್ರಶ್ನೆ ಚಿಂತನೆಯಲ್ಲಿ ಗ್ರಾಮ ದೇವಾಲಯ ನಾಶವಾದ ಅಂಶ ಬೆಳಕಿಗೆ; ಜೀರ್ಣೋದ್ದಾರವಾಗದಿದ್ದರೆ ಮಾಣಿ ಅಭಿವೃದ್ಧಿ ಕಷ್ಟ ಸಾಧ್ಯ!!

spot_img
- Advertisement -
- Advertisement -

ಮಂಗಳೂರು:ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂದಿಸುವ ಮಾಣಿ ಗ್ರಾಮದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಹಲವಾರು ಕಟ್ಟಡ ತೆರವುಗೊಳ್ಳಲ್ಲಿದ್ದು, ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ಇಡೀ ಕಟ್ಟಡ ತೆರವುಗೊಳ್ಳಲಿದೆ. ಆದ್ದರಿಂದ ಈ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮಾಣಿಯಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಸಮೀಪದ ಪೆರಾಜೆ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸುತ್ತದೆ.

ಸಾವಿರಾರು ವಿದ್ಯಾರ್ಥಿಗಳು ಕಲಿಯುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಳಿತಾಗಬೇಕೆಂಬ ಸದುದ್ದೇಶದಿಂದ ಹೊಸ ಜಾಗ ಪರಿಸರದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಾರೆ. ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮೊದಲು ಖಾಸಗಿ ಪ್ರಶ್ನೆ ಚಿಂತನೆ ನಡೆಸಿ ಆಮೇಲೆ ಕಟ್ಟಡ ಕಟ್ಟಲು ಆಲೋಚಿಸಿದ ಆಡಳಿತ ಮಂಡಳಿ ಪ್ರಸಿದ್ಧ ಜೋಯಿಸರ ಮೂಲಕ ಸ್ಥಳ ಪ್ರಶ್ನೆ ‍ಚಿಂತನೆ ನಡೆಸುತ್ತದೆ.

ಇದೊಂದು ತೀರ ಖಾಸಗಿ ಕಾರ್ಯಕ್ರಮವಾದರೂ ಆ ಪ್ರಶ್ನಾ ಚಿಂತನೆಯಲ್ಲಿ ಗ್ರಾಮದ ದೇವಾಲಯ ನಾಶವಾದ ಮಹತ್ವದ ಚಿಂತನೆ ಅನಾವರಣ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿ ಸುದ್ದಿಯಾಗಿದೆ .ಅಷ್ಟೇಅಲ್ಲದೆ ಈ ದೇವಾಲಯ ಜೀರ್ಣೋದ್ಧಾರ ಆಗದೇ ಮಾಣಿ ಗ್ರಾಮದ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ಕಂಡು ಬಂದಿದೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಈ ವಿದ್ಯಾಸಂಸ್ಥೆಯ ಹಳೆಯ ಕಟ್ಟಡ ಮಾಣಿ ಗ್ರಾಮದಲ್ಲಿ ಇದ್ದು ಹೆದ್ದಾರಿಯ ಅಗಲಿಕರಣದ ಬಳಿಕ ನೂತನ ಕಟ್ಟಲು ಉದ್ದೇಶಿತ ಶಾಲೆ ಪೆರಾಜೆ ಗ್ರಾಮದಲ್ಲಿ ಇರುತ್ತದೆ.ಈ ಪ್ರಶ್ನಾ ಚಿಂತನೆ ವಿಷಯ ಮಾಣಿ ಗ್ರಾಮದ ದಾರ್ಮಿಕ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ ಮತ್ತು ಸೂಕ್ತ- ಪ್ರಾಯಶ್ಚಿತ್ತ ಹಾಗೂ ಪರಿಹಾರವನ್ನು ಮಾಡಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ ಎಂಬ ಮಾಹಿತಿಯೂ ಲಭ್ಯ ವಾಗಿದೆ.

ಈ ಒಂದು ವಿದ್ಯಾಮಾನದಿಂದ ಜ್ಯೋತಿಷ್ಯ ಎಂಬುದು ಎಷ್ಟೋಂದು ಪರಿಣಾಮಕಾರಿ ಹಾಗೂ ಅನಾದಿಕಾಲದಿಂದಲೂ ಬಂದ ಸತ್ಯ ಶೋಧನೆ ಸಾಧನ ಎಂಬುದು ಸಾಬೀತಾಗಿದೆ ಎಂದು ಮಾಣಿ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಹಿನ್ನೆಲೆ:
ಕೆಲವು ದಶಕಗಳ ಹಿಂದೆ ಮಾಣಿ ಗ್ರಾಮದ ವಿಟಲಕೋಡಿ ಸಮೀಪದ ಬಾನೊಟ್ಟು ಎಂಬಲ್ಲಿ ಪ್ರಾಚೀನ ಶಿವ ದೇವಾಲಯ ಒಂದು ರೈಲುಮಾರ್ಗದ ನಿರ್ಮಾಣದ ವೇಳೆ ತೆರವುಗೊಂಡಿತ್ತು. ಇದು ಉಮಾಮಹೇಶ್ವರ ದೇವಾಲಯ ಎನ್ನಲಾಗುತ್ತಿದ್ದು, ಇದು ಸುಳ್ಳಮಲೆ ಮೂಲದ ದೇವರಾಗಿದ್ದಾರೆ. ಒಟ್ಟಿನಲ್ಲಿ ಅವಿಭಜಿತ ಮಾಣಿ ಗ್ರಾಮ( ಅರೆಬೆಟ್ಟು- ಮಾಣಿ- ಪೆರಾಜೆ) ,ಅನಂತಾಡಿ ಹಾಗೂ ವೀರಕಂಭ ಗ್ರಾಮದ ವರೆಗೆ ಈ ದೇವರ ವ್ಯಾಪ್ತಿ ಅನಾದಿಕಾಲದಿಂದಲೂ ಇತ್ತೆಂದು ಹೇಳಲಾಗಿದೆ. ಜಾತ್ರೆ – ಉತ್ಸವಾದಿಗಳು ನಡೆಯುತ್ತಿದ್ದಿರಬಹುದೆಂದು ನಂಬಲಾಗಿದೆ.ಈ ದೇವರು ಮುಡಿಪಿನ ದೇವರಾಗಿದ್ದು, ಈ ದೇವರ ಹೆಸರಿನಲ್ಲಿ ಹಿಂದಿನ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂ ಭಾಗ ಉಂಬಳಿ ದಾನಶಾಸನದ ಭೂಮಿಗಳು ಇದ್ದವು ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮುಂದೆ ಬರದೆ ಜೀರ್ಣೋದ್ಧಾರ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದು,ಗ್ರಾಮದಲ್ಲಿ ಈ ಹಿಂದೆಯೂ ಎಲ್ಲೇ ಸಾಮಾನ್ಯ ಪ್ರಶ್ನೆ, ಆರೂಡ ಪ್ರಶ್ನೆ ಇಟ್ಟರೂ ಈ ದೇವಾಲಯ ನಾಶದ ಚಿಂತನೆ ಕಂಡುಬರುತ್ತಿದೆ ಎನ್ನಲಾಗಿದೆ.ಈ ದೇವಾಲಯ ಶೀಘ್ರವಾಗಿ ಜೀರ್ಣೋದ್ಧಾರ ಆಗದಿದ್ದರೆ ಮಾಣಿ ಗ್ರಾಮದಲ್ಲಿ ಭವಿಷ್ಯದಲ್ಲಿ ತೊಂದರೆ ಆಗುತ್ತದೆ.ಅಭಿವೃದ್ಧಿ ನಶಿಸಲಿದೆ ಎಂದು ತ್ರಜ್ಙರು ವಿಶ್ಲೇಷಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!