Thursday, August 20, 2026
Homeತಾಜಾ ಸುದ್ದಿಸಾಲ ಕೊಟ್ಟು ಮತ್ತೆ ಕೇಳಿದ್ದಕ್ಕೆ ಅತ್ಯಾಚಾರವೆಸಗಿದ ಪಾಪಿ- ಸಂತ್ರಸ್ತೆಯಿಂದ ಪೊಲೀಸರಿಗೆ ದೂರು

ಸಾಲ ಕೊಟ್ಟು ಮತ್ತೆ ಕೇಳಿದ್ದಕ್ಕೆ ಅತ್ಯಾಚಾರವೆಸಗಿದ ಪಾಪಿ- ಸಂತ್ರಸ್ತೆಯಿಂದ ಪೊಲೀಸರಿಗೆ ದೂರು

- Advertisement -
- Advertisement -

ಕೋಲ್ಕತ:ಇಲ್ಲಿನ ಮಾಧ್ಯಮಿಕ ಶಾಲೆಯೊಂದರ ವಿದ್ಯಾರ್ಥಿನಿಯೋರ್ವಳು ಅದೇಪ್ರದೇಶದ ಆಬಿರ್​ ನಾಸ್ಕರ್​ ಅಲಿಯಾಸ್​ ನಾಂತು ಎಂಬವನೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಪರಿಚಯವಾಗಿ ಸ್ನೇಹ ಹೊಂದಿದ್ದರು. ಇಬ್ಬರೂ ಫೋನ್​ ಕರೆಗಳನ್ನೂ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಯಾವುದೋ ಸಮಸ್ಯೆ ಇದೆ ಎಂದು ಹೇಳಿ ವಿದ್ಯಾರ್ಥಿನಿ ಬಳಿ 4 ಸಾವಿರ ರೂಪಾಯಿ ಸಾಲವನ್ನು ನಾಂತು ಪಡೆದಿದ್ದ. ಆದರೆ ತಿಂಗಳುಗಳು ಉರುಳಿದರೂ ಸಾಲವನ್ನು ವಾಪಾಸ್ ನೀಡಿರಲಿಲ್ಲ

ವಿದ್ಯಾರ್ಥಿನಿ ಸಾಲಕ್ಕಾಗಿ ಒತ್ತಡ ಹಾಕಲಾರಂಭಿಸಿದಾಗ ತೀರಿಸುವುದಾಗಿ ತನ್ನ ಮನೆಗೆ ಬರಲು ಹೇಳಿ ಆರೋಪಿ ಮನೆಗೆ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದೇವೇಳೆ ಇನ್ನೊಮ್ಮೆ ಸಾಲ ವಾಪಾಸು ಕೇಳಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದ.ವಿದ್ಯಾರ್ಥಿನಿ ತಂದೆ ತಾಯಿ ಬಳಿ ಘಟನೆಯನ್ನು ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!