Monday, June 8, 2026
HomeUncategorizedಬೆಳ್ತಂಗಡಿ; ದುಬೈಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕುವೆಟ್ಟು ನಿವಾಸಿ ಸಾವು

ಬೆಳ್ತಂಗಡಿ; ದುಬೈಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕುವೆಟ್ಟು ನಿವಾಸಿ ಸಾವು

- Advertisement -
- Advertisement -

ಬೆಳ್ತಂಗಡಿ: ದುಬೈಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕುವೆಟ್ಟು ನಿವಾಸಿ ಕ್ಲೇವನ್ ಅವಿನ್ ರೊಡ್ರಿಗಸ್ ಮೃತ ಪಟ್ಟ ಘಟನೆ ನಡೆದಿದೆ.

ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ನಿವಾಸಿ ಕ್ಲೇವನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು.

3 ದಿನಗಳ ಹಿಂದೆಯಷ್ಟೆ ಇವರಿಗೆ ಉದ್ಯೋಗ ದೊರಕಿದ್ದು, ಕೆಲಸದಿಂದ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಬರುವಾಗ ಅಪಘಾತವಾಗಿ ಡಿವೈಡರ್ ಗೆ ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!