Thursday, June 4, 2026
HomeUncategorizedಶಿರ್ವ:ಮೀನಿಗೆ ಗಾಳ ಹಾಕಲು ಹೋದ ವ್ಯಕ್ತಿ ನೀರು ಪಾಲು

ಶಿರ್ವ:ಮೀನಿಗೆ ಗಾಳ ಹಾಕಲು ಹೋದ ವ್ಯಕ್ತಿ ನೀರು ಪಾಲು

- Advertisement -
- Advertisement -

ಶಿರ್ವ: ವ್ಯಕ್ತಿಯೋರ್ವ ರವಿವಾರ ಸಂಜೆ ಮೀನು ಹಿಡಿಯಲು ಗಾಳ ಹಾಕುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ನೀರು ಪಾಲಾದ ಘಟನೆ ಶಿರ್ವ ನಡಿಬೆಟ್ಟು ಆಣೆಕಟ್ಟು ಬಳಿ ನಡೆದಿದೆ.

ದುರ್ಘಟನೆ ನಡೆದ ವ್ಯಕ್ತಿಯನ್ನು ಶಿರ್ವ ಮಟ್ಟಾರು ನಿವಾಸಿ ದಿಲೀಪ್ (30)ಎಂದು ಗುರುತಿಸಲಾಗಿದ್ದು ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮಲ್ಪೆಯ ಮುಳುಗು ತಜ್ಞ ಈಶ್ವರ್ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಶವ ಪತ್ತೆಯಾಗದ ಹಿನ್ನೆಲೆ ರಾತ್ರಿ ಬೆಳಕಿನ ಅಡಚನೆಯಿಂದಾಗಿ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ.

- Advertisement -

Latest News

error: Content is protected !!