Wednesday, June 24, 2026
Homeಕರಾವಳಿಕಾಸರಗೋಡುಕಾಸರಗೋಡು: ಅನಾರೋಗ್ಯದಿಂದ ಬಾಣಂತಿ ಸಾವು;ಅನಾಥವಾದ ಮಗುವಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ನರ್ಸ್

ಕಾಸರಗೋಡು: ಅನಾರೋಗ್ಯದಿಂದ ಬಾಣಂತಿ ಸಾವು;ಅನಾಥವಾದ ಮಗುವಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ನರ್ಸ್

- Advertisement -
- Advertisement -

ಕಾಸರಗೋಡು: ಅನಾರೋಗ್ಯದಿಂದ ಸಾವನ್ನಪ್ಪಿದ ಒಂದು ತಿಂಗಳ ಬಾಣಂತಿಯ ಮಗುವಿಗೆ ನರ್ಸ್ ಒಬ್ಬರು ಎದೆ ಹಾಲು ನೀಡಿ ಮಾತೃಪ್ರೇಮ ಮೆರೆದ ಘಟನೆ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಅಸ್ಸಾಂ ಮೂಲದ ರಾಜೇಶ್ ಬರ್ಮನ್ ಅವರ ಪತ್ನಿ ಏಕಾದಶಿ ಮಾಲಿ ಮೇ 5 ರಂದು ಪರಯರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.  ಆ ಬಳಿಕ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೂನ್ 13ರಂದು ಮೃತಪಟ್ಟಿದ್ದರು.

ಹೀಗಿರುವಾಗ 37 ದಿನಗಳ ಮಗು ರಿಯಾ ಬರ್ಮನ್ ಹಸಿವಿನಿಂದ ಅಳಲು ಪ್ರಾರಂಭಿಸಿದೆ. ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮೆರಿನ್ ಅವರು ಮಗುವಿನ ಅಳು ಕೇಳಿ ಎದೆಹಾಲು ಕುಡಿಸಿದ್ದಾರೆ.

ಮೇರಿ ಅವರು ಮಾತೃಪ್ರೇಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಜಮಾಲ್ ಅಹ್ಮದ್ ಅವರನ್ನು ಅಭಿನಂದಿಸಿದ್ದಾರೆ.

- Advertisement -

Latest News

error: Content is protected !!