- Advertisement -
![]()
- Advertisement -
ಕುಂದಾಪುರ: ಐದು ತಿಂಗಳ ಹಿಂದೆ ಅಂಪಾರುವಿನಲ್ಲಿ ಮೃತದೇಹ ಪತ್ತೆಯಾದ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಅಂಪಾರುವಿನ ಹಡಾಳಿಯ ವರಾಹಿ ಹೊಳೆಯಲ್ಲಿ ವಿನಯ ಪೂಜಾರಿ ಎಂಬುವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಇವರ ಸಾವು ಕೊಲೆ ಎಂದು ಸಾಬೀತಾಗಿದೆ.
ವಿನಯ್ ಪೂಜಾರಿಯನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮೃತರ ಅಕ್ಕ ಜಯಶ್ರೀ ಎಂಬುವರು ದೂರು ನೀಡಿದ್ರು. ಇದೀಗ ವೈದ್ಯರ ವರದಿಯಲ್ಲಿ ವಿನಯ್ ಕುಮಾರ್ ಕುತ್ತಿಗೆ ಹಿಸುಕಿ ಕೊಲೆಗೈದಿರುವುದು ವರದಿಯಿಂದ ತಿಳಿದುಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
- Advertisement -


