Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ; ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಅಪ್ರಾಪ್ತ ಬಾಲಕ; 13 ವರ್ಷದ ಬಾಲಕನನ್ನು...

ಬಂಟ್ವಾಳ; ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಅಪ್ರಾಪ್ತ ಬಾಲಕ; 13 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬಂಟ್ವಾಳ; ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ;  ಅಪರಿಚಿತ ಸ್ಕೂಟರ್ ಸವಾರನು ರಸ್ತೆಯಲ್ಲಿ ರಾತ್ರಿ 7.30-8.00 ಗಂಟೆಯ ಅವಧಿಯಲ್ಲಿ ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ  ಕೃತ್ಯ ಎಸಗಿದ್ದು, ಆರೋಪಿತನ ಪತ್ತೆ ಬಗ್ಗೆ ತನಿಖೆ ನಡೆಸಲಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ನಿವಾಸಿ ತನ್ನ ಪೋಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕನು ಈ ಕೃತ್ಯವನ್ನು ಎಸಗಿರುವುದು ಲಭ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ. ಅದರಂತೆ ದಿನಾಂಕ: 26.08.2025ರಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಆತನ ಸ್ವ ಗೃಹದಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ  ಹೇಳಿಕೆ ಪಡೆದು, ಬಾಲನ್ಯಾಯ  ಮಂಡಳಿ ಮಂಗಳೂರುರವರ ಸಮಕ್ಷಮಕ್ಕೆ ದಿನಾಂಕ: 26.08.2025ರಂದು ಹಾಜರುಪಡಿಸಲಾಗಿದ್ದು, ಮಾನ್ಯ ಬಾಲ ನ್ಯಾಯಾಲಯವು ಬಾಲಕನನ್ನು ದಿನಾಂಕ 02.09.2025 ವರೆಗೆ ಪರಿವೀಕ್ಷಣಾ  ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿರುತ್ತಾರೆ.

- Advertisement -

Latest News

error: Content is protected !!