Sunday, April 28, 2024
Homeಕರಾವಳಿಕರಾವಳಿಯಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಸಂದೇಶ; ಹಿಂದೂ ವ್ಯಕ್ತಿಯೊಬ್ಬರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ‘ಇಫ್ತಾರ್ ಕೂಟ’

ಕರಾವಳಿಯಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಸಂದೇಶ; ಹಿಂದೂ ವ್ಯಕ್ತಿಯೊಬ್ಬರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ‘ಇಫ್ತಾರ್ ಕೂಟ’

spot_img
- Advertisement -
- Advertisement -

ಪುತ್ತೂರು: ಕರಾವಳಿ ಎಂದರೆ ಕೋಮುಗಲಭೆಯ ತಾಣ ಎಂದು ಭಾವಿಸುವ ಅನೇಕರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಇಲ್ಲಿನ ಹಿಂದೂ ಮುಸ್ಲಿಂ ಬಾಂಧವರು ತಮ್ಮ ಭಾವೈಕ್ಯತೆಯನ್ನು ಸಾರುತ್ತಿದ್ದಾರೆ. ಹಿಂದೂ  ಬಾಂಧವರು ಮುಸ್ಲಿಂ ಬಾಂಧವರಿಗೆ ರಂಜನ್ ಹಬ್ಬದ ಪ್ರಯುಕ್ತ ‘ಇಫ್ತಾರ್ ಕೂಟ’ವನ್ನು ಆಯೋಜಿಸುತ್ತಿದ್ದಾರೆ.

ಪುತ್ತೂರಿನ ಪದ್ಮುಂಜ ಸಮೀಪದ ಅಂತರದಲ್ಲಿ ರವಿಚಂದ್ರ ಶೆಟ್ಟಿ ಅಂತರ ಅವರು ನೂತನವಾಗಿ ಮನೆ ನಿರ್ಮಿಸಿದ್ದು, ಮನೆಯ ಗೃಹ ಪ್ರವೇಶ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ಸಂಜೆ ಇಪ್ತಾರ್ ಕೂಟ ಹಮ್ಮಿಕೊಂಡಿದ್ದರು.

ಪರಿಸರದ ಮುಸ್ಲಿಂ ಬಾಂದವರು ಅವರ ಆಥಿತ್ಯವನ್ನು ಸ್ವೀಕರಿಸಿದರು. ಇಪ್ತಾರ್ ಸಂಗಮದಲ್ಲಿ ಪದ್ಮುಂಜ ಜಮಾ ಅತ್ತ್ ಅಧ್ಯಕ್ಷ ರಫೀಖ್ ಅಂತರ, ಪ್ರ.ಕಾರ್ಯದರ್ಶಿ ಖಾಸಿಂ ಪದ್ಮುಂಜ, SYS ಅಧ್ಯಕ್ಷ ನಝೀರ್ ಮಲೆಂಗಲ್ಲು, SSF ಅಧ್ಯಕ್ಷ ನವಾಝ್ ಅಂತರ, ಖಲಂದರ್ ಪದ್ಮುಂಜ, ಫಾರೂಖ್ ಸ ಅದಿ ಪದ್ಮುಂಜ ಸಹಿತ ವಿವಿಧ ಸಂಘಟನೆಯ ನಾಯಕರು ಭಾಗವಹಿಸಿದರು.

ಖಾಸಿಂ ಪದ್ಮುಂಜ ಪ್ರಸ್ತಾವಿಕ ಮಾತುಗಳನ್ನಾಡಿ, ‘ಇದು ಸೌಹಾರ್ದತೆಯ ಭಾಂದವ್ಯ ಹೆಚ್ಚಿಸುವ ವಿಶೇಷ ಕಾರ್ಯಕ್ರಮ. ಇದು ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿ ರವಿಚಂದ್ರ ಹಾಗೂ ಅವರ ಫ್ಯಾಮಿಲಿಗೆ ಧನ್ಯವಾದ ಹೇಳಿದರು. ಸಭೆಯಲ್ಲಿ ಉದಯ ಮೇಲಂಟ, ರಮಾನಂದ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!