Monday, June 8, 2026
Homeಕರಾವಳಿಉಡುಪಿಬ್ರಹ್ಮಾವರ: ಡೆತ್‌ನೋಟ್‌ ಬರೆದಿಟ್ಟು ಇಲಿಪಾಷಾಣ ಸೇವಿಸಿ ವಿವಾಹಿತೆ ಆತ್ಮಹತ್ಯೆ

ಬ್ರಹ್ಮಾವರ: ಡೆತ್‌ನೋಟ್‌ ಬರೆದಿಟ್ಟು ಇಲಿಪಾಷಾಣ ಸೇವಿಸಿ ವಿವಾಹಿತೆ ಆತ್ಮಹತ್ಯೆ

- Advertisement -
- Advertisement -

ಬ್ರಹ್ಮಾವರ: ಡೆತ್‌ ನೋಟ್‌ ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿನ್ನಿ ಶೈಜು ಥೋಮಸ್ (30) ಆತ್ಮಹತ್ಯೆ ಮಾಡಿಕೊಂಡವರು. ಇವರು ಹಂದಾಡಿ ಗ್ರಾಮದ ಬೇಳೂರುಜೆಡ್ಡು ಎಂಬಲ್ಲಿ ಮಗಳೊಂದಿಗೆ ವಾಸವಿದ್ರು. ಇವರ ಪತಿ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದಾರೆ. ಅ.26 ರಂದು ರಾತ್ರಿ ಇಲಿಪಾಷಣ ಸೇವಿಸಿ ಡೆತ್ ನೋಟ್ ಬರೆದಿಟ್ಟು ಯಾರಿಗೂ ಹೇಳದೆ ಮನೆಯಲ್ಲಿದ್ದರು. ಅ.31 ರಂದು ತೀವ್ರ ಅಸ್ವಸ್ಥಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನ.5 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!