Wednesday, June 3, 2026
Homeಕರಾವಳಿಮಂಗಳೂರುಕಡಬ; ಹುಲ್ಲು ಕಟ್ಟಿಂಗ್ ಮೆಷಿನ್ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಗಂಭೀರ ಗಾಯ

ಕಡಬ; ಹುಲ್ಲು ಕಟ್ಟಿಂಗ್ ಮೆಷಿನ್ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಗಂಭೀರ ಗಾಯ

- Advertisement -
- Advertisement -

ಕಡಬ; ಹುಲ್ಲು ಕಟ್ಟಿಂಗ್ ಮೆಷಿನ್ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಗಂಭೀರ ಗಾಯವಾಗಿರುವ ಘಟನೆ ಉಪ್ಪಿನಂಗಡಿ –  ಸುಬ್ರಹ್ಮಣ್ಯ, ರಾಜ್ಯ  ಹೆದ್ದಾರಿ ಬದಿಯ  ಕುಲ್ಕುಂದದಲ್ಲಿ ನಡೆದಿದೆ. ನಾರಾಯಣ ಗಾಯಗೊಂಡ ವ್ಯಕ್ತಿ.

ನಾರಾಯಣ ಅವರು  ಜ.5 ರಂದು ಕುಲ್ಕುಂದದ ವಿಶ್ವನಾಥ ರಾವ್ ಎಂಬವರ  ಜಾಗದ ಹುಲ್ಲನ್ನು ಕಟ್ಟಿಂಗ್ ಮಾಡುವ ಸಲುವಾಗಿ ಬಂದು ಕೆಲಸವಾದ ಬಳಿಕ  ನೀಲಪ್ಪ ಗೌಡ ಎಂಬವರ ಜೊತೆ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ  ಡಾಂಬಾರು ರಸ್ತೆಯ  ಬದಿ ಮಣ್ಣು ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಕೈಕಂಬ ಕಡೆಯಿಂದ ಸುಬ್ರಹ್ಮಣ್ಯ ಕಡೆಯಿಂದ ಕಾರೊಂದನ್ನು ಚಾಲಕ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಯಲ್ಲಿ ಹಲ್ಲು ಕಟ್ಟಿಂಗ್ ಮಷಿನ್ ಹಿಡಿದುಕೊಂಡಿದ್ದ ನಾರಾಯಣ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ನಾರಾಯಣ ಅವರು ಮಿಷನ್ ಸಮೇತ ಸುಮಾರು 10 ಅಡಿ ದೂರ ಎಸೆಯಲ್ಪಟ್ಟು ಅವರ ತಲೆಯ ಎಡಭಾಗ, ಸೊಂಟದ ಎಡಭಾಗಕ್ಕೆ ಗಾಯವಾಗಿದೆ. ಕೂಡಲೇ  108 ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲಾಗಿದೆ. ನಾರಾಯಣ ಗೌಡರವರು ಹಿಡಿದುಕೊಂಡಿದ್ದ ಕಟ್ಟಿಂಗ್ ಮಿಷನ್ ತಾಗಿ ನೀಲಪ್ಪ ಗೌಡ ಎಂಬವರಿಗೂ ತಾಗಿ ಮೈಕೈಗೆ ಗುದ್ದಿದ ಗಾಯವಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!