Monday, June 8, 2026
Homeಕರಾವಳಿಕಡಬ; ರಸ್ತೆಯಲ್ಲಿ ಬಿದ್ದು ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಕಡಬ; ರಸ್ತೆಯಲ್ಲಿ ಬಿದ್ದು ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

- Advertisement -
- Advertisement -

ಕಡಬ; ರಸ್ತೆಯಲ್ಲಿ ಬಿದ್ದು ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರಸುದಾರರಿಗೆ ಒಪ್ಪಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ತರಕಾರಿ ವ್ಯಾಪಾರಿ ಉಪ್ಪಿನಂಗಡಿಯ ಮೋನಾಕ ಎಂಬವರು ನೆಲ್ಯಾಡಿಯಲ್ಲಿ ತಮ್ಮ 35 ಸಾವಿರ ರೂ.ಕಳೆದುಕೊಂಡಿದ್ದರು. ಇದು  ಎಸ್ ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ಸದಸ್ಯ ಶರೀಫ್ ಅವರಿಗೆ ಸಿಕ್ಕಿತ್ತು.  ಅವರು ಹಣ ಸಿಕ್ಕಿರುವ ಬಗ್ಗೆ ವಾಟ್ಸಾಪ್ ಗ್ರೂಪ್ಗಳಲ್ಲಿ ಮೆಸೇಜ್ ಹಾಕಿ, ಸಂಪರ್ಕಿಸಬೇಕಾದ ಮೊಬೈಲಮ ಸಂಖ್ಯೆಯನ್ನು ನಮೂದಿಸಿದ್ದರು.

ಕೆಲವೇ ನಿಮಿಷಗಳಲ್ಲಿ ಈ ಸಂದೇಶವು ಸುತ್ತಮುತ್ತಲಿನ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಆಗಿತ್ತು. ಹಣ ಕಳೆದುಕೊಂಡ ಮೋನಾಕರವರು ಶರೀಫ್‌ರವರನ್ನು ಸಂಪರ್ಕಿಸಿ ಹಣ ತನ್ನದೆಂದು ಖಾತ್ರಿಪಡಿಸಿದರು. ಅದರಂತೆ ಶರೀಫ್‌ರವರು ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.

- Advertisement -

Latest News

error: Content is protected !!