Thursday, June 25, 2026
Homeಕರಾವಳಿಬೆಳ್ತಂಗಡಿ : ಕುತ್ಲೂರು ನಕ್ಸಲ್ ನಾಯಕಿ ಸುಂದರಿ ಕುಟುಂಬ ಈಗ ಹೇಗಿದೆ ಗೊತ್ತಾ..!

ಬೆಳ್ತಂಗಡಿ : ಕುತ್ಲೂರು ನಕ್ಸಲ್ ನಾಯಕಿ ಸುಂದರಿ ಕುಟುಂಬ ಈಗ ಹೇಗಿದೆ ಗೊತ್ತಾ..!

- Advertisement -
- Advertisement -

ಬೆಳ್ತಂಗಡಿ : ಸರಕಾರ ಯಾವುದೇ ಮೂಲಸೌಕರ್ಯ ನೀಡದೆ ತುತ್ತ ತುದಿಯ ಕುದುರೆಮುಖ ರಕ್ಷಿತಾರಣ್ಯದೊಳಗೆ ಜೀವನ ಮಾಡುತ್ತಿರುವ ಮಲೆಕುಡಿಯ ಸಮುದಾಯವರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ವಿರುದ್ಧ ಹೋರಾಟದ ಹಾದಿ ಹಿಡಿದು ಬಂದೂಕಿನ ಮೂಲಕ ರಕ್ತ ಹರಿಸಿ ‘ಕೆಂಪು ಉಗ್ರರು’ ಎಂದು ಹಣೆಪಟ್ಟಿ ಪಡೆದುಕೊಂಡವರು ಎಷ್ಟೋ ಜನ ಅದರಲ್ಲಿ ಬದುಕಿದವರಿಗಿಂತ ಪೊಲೀಸರ ಗುಂಡಿಗೆ ಸತ್ತವರೆ ಹೆಚ್ಚು. ಆ ನಡುವೆ ಕರ್ನಾಟಕದಲ್ಲಿ ಈಗ ಬದುಕಿರುವ ನಕ್ಸಲರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.ಇವರು ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ಥಂಡರ್ ಆಗಿ ಮುಖ್ಯವಾಹಿನಿಗೆ ಬರಲು ಬಯಸಿದ್ದಾರೆ ಎನ್ನಲಾಗಿದೆ.

ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ಸೈಲೆಂಟ್ ಆಗಿ ಶರಣಾಗತಿ:.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪಿತೇಬೈಲ್ ನಲ್ಲಿ ಎ.ಎನ್.ಎಫ್ ಪೊಲೀಸರ ಗುಂಡಿಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾದ ಬಳಿಕ ನಕ್ಸಲರಾದ ಮುಂಡಗಾರು ಲತಾ,ವನಜಾಕ್ಷಿ,ಸುಂದರಿ ಸೇರಿದಂತೆ ಆರು ನಕ್ಸಲರು ಭಯದಿಂದ ಈವರೆಗೂ ಕಾಡಿನಚ್ಚಿನ ಮನೆಗಳಿಗೆ ದಿನಸಿ ಸಾಮಾನುಗಳಿಗಾಗಿ ಹೋಗದೆ ಭೂಗತವಾಗಿದ್ದುಕೊಂಡು ಮುಖ್ಯವಾಹಿನಿಗೆ ಬರಲು ನಕ್ಸಲ್ ಶರಣಾಗತಿ ಸಮಿತಿಗೆ ಪತ್ರ ಬರೆದು ಸರಕಾರದ ಆಜ್ಞೆಗಾಗಿ ಕಾಯುತ್ತಿದ್ದರು. ಅದು ಈಗ ನಕ್ಸಲ್ ಶರಣಾಗತಿ ಸಮಿತಿ ಮೂಲಕ ಸಕ್ಸಸ್ ಕಂಡಿದೆ ಎನ್ನಲಾಗಿದೆ.

ಬೆಳ್ತಂಗಡಿಯ ನಕ್ಸಲ್ ‌ನಾಯಕಿ ಸುಂದರಿ ಕುಟುಂಬ:
ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿರುವ ಸುಮಾರು 5 ಕಿ.ಮೀ ಕ್ರಮಿಸಿ ಕಾಡಿನಚ್ಚಿನಲ್ಲಿರುವ ಕೋಟ್ಯಾಂದಡ್ಕ ನಿವಾಸಿ ದಿ.ಬಾಬು ಮಲೆಕುಡಿಯ ಮತ್ತು ಶ್ರೀಮತಿ ದಂಪತಿಗಳಿಗೆ ಒಟ್ಟು ಐದು ಮಂದಿ ಮಕ್ಕಳು ಮೊದಲ ಮಗಳು ವಾರಿಜ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಳೆ ಗ್ರಾಮದ ಮತವೊ ಮನೆಯ ವಿಠಲ ಎಂಬವರಿಗೆ ಮದುವೆ ಮಾಡಲಾಗಿದ್ದು ಇವರಿಗೆ ಮೂರು ಜನ ಗಂಡು ಮಕ್ಕಳಿದ್ದು ಜೀವನ ನಡೆಸುತ್ತಿದ್ದಾರೆ. ಎರಡನೇ ಮಗ ಲೋಕಯ್ಯ (50) ಎಂಬವರಿಗೆ ಮದುವೆಯಾಗಿರಲ್ಲಿಲ್ಲ ಕಳೆದ 12 ವರ್ಷದ ಹಿಂದೆ ಪಕ್ಕದ ಮನೆಯಲ್ಲಿ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೂರನೇ ಮಗಳು ನಕ್ಸಲ್ ನಾಯಕಿ ಸುಂದರಿ (46) ಅಗಿದ್ದು 2007 ರಲ್ಲಿ ನಕ್ಸಲ್ ಹೋರಾಟ ಮಾಡಲು ಮನೆ ಬಿಟ್ಟಿ ಹೋಗಿದ್ದಾಳೆ. ನಾಲ್ಕನೇ ಮಗ ಸುರೇಶ್ (43) ಡಿಗ್ರಿ ಮುಗಿಸಿ ಕೆಲ ವರ್ಷ ಉದ್ಯೋಗ ಮಾಡಿ ಬಳಿಕ ಮನೆಯಲ್ಲಿ 1.15 ಎಕ್ರೆ ಜಾಗ ಇದ್ದು ಕೃಷಿ ಮಾಡುತ್ತಿದ್ದಾರೆ.ಇವರಿಗೆ ಹತ್ತಿರದ ಊರಿನ ಸವಿತಾ ಜೊತೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.ಐದನೇಯ ಮಗ ನಕ್ಸಲ್ ನಾಯಕನಾಗಿದ್ದ ವಸಂತ @ಆನಂದ ಈತ 2010 ಮಾ.1 ರಂದು ಉಡುಪಿ ಜಿಲ್ಲೆಯ ಕಾರ್ಕಳ ಮುಟ್ಲುಪಾಡಿಯ ಮೈರೋಳಿಯಲ್ಲಿ ಪೊಲೀಸ್ ಎನ್ ಕೌಂಟರ್ ಬಲಿಯಾಗಿದ್ದಾನೆ.

- Advertisement -

Latest News

error: Content is protected !!