Thursday, June 25, 2026
Homeಕರಾವಳಿಉಡುಪಿಗಂಗೊಳ್ಳಿ: ಅಸ್ತಮಾದಿಂದ ಬಳಲುತ್ತಿದ್ದ ವ್ಯಕ್ತಿ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ

ಗಂಗೊಳ್ಳಿ: ಅಸ್ತಮಾದಿಂದ ಬಳಲುತ್ತಿದ್ದ ವ್ಯಕ್ತಿ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ಗಂಗೊಳ್ಳಿ: ವ್ಯಕ್ತಿಯೊಬ್ಬರು ಖಾಯಿಲೆಯಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಜ್ಜಾಡಿ ಬಸ್ ನಿಲ್ದಾಣದ ಬಳಿಯ ನಿವಾಸಿ ರಘುನಾಥ ಮೇಸ್ತ (60) ತಮ್ಮ ಬೈಕ್ ನ್ನು ಅರಾಟೆ ಸೇತುವೆ ಮೇಲೆ ನಿಲ್ಲಿಸಿ ಸೇತುವೆ ಮೇಲಿಂದ ಕೆಳಗೆ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು.

ಮನೆಯಿಂದ ರಾತ್ರಿ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಸಮಯಗಳಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಚಿಕಿತ್ಸೆ ಪಡೆದರೂ ಗುಣವಾಗದೆ ಇದ್ದುದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!