Saturday, June 6, 2026
Homeಕರಾವಳಿಉಡುಪಿಬ್ರಹ್ಮಾವರ: ಕಳ್ಳತನ ಸಂಶಯದ ಮೇರೆಗೆ ಓರ್ವನ ಬಂಧನ !

ಬ್ರಹ್ಮಾವರ: ಕಳ್ಳತನ ಸಂಶಯದ ಮೇರೆಗೆ ಓರ್ವನ ಬಂಧನ !

- Advertisement -
- Advertisement -

ಬ್ರಹ್ಮಾವರ: ಚೇರ್ಕಾಡಿ ಬಳಿ ಕಳ್ಳತನ ನಡೆಸಿರುವ ಸಂಶಯದ ಮೇಲೆ ಓರ್ವನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ .

ಚೇರ್ಕಾಡಿಯ ವಿಠಲ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ .ಹಾದಿಮನಿ ಅವರು ಇತರ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ವಿಠಲ ಎಂಬ ವ್ಯಕ್ತಿ ಪೊಲೀಸರನ್ನು ಕಂಡು ಕೈಯಲ್ಲಿ ಹಿಡಿದುಕೊಂಡಿದ್ದ ಚೀಲವನ್ನು ರಸ್ತೆ ಬದಿ ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ .

ಈ ವೇಳೆ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ . ಬಳಿಕ ಆತ ಹಿಡಿದಿದ್ದ ಚೀಲವನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಹಳೆಯ ಪಂಪ್ ತುಂಬಿಸಿರುವುದು ಕಂಡು ಬಂದಿದೆ .

ಈ ಬಗ್ಗೆ ಆತನ ಬಳಿ ವಿಚಾರಿಸಿದಾಗ ಆತ ಸೂಕ್ತ ಉತ್ತರ ನೀಡದೇ ಇದ್ದುದರಿಂದ ಆತ ಪಂಪ್‌ನ್ನು ಎಲ್ಲಿಯೋ ಕಳವು ಮಾಡಿಕೊಂಡು ಬಂದಿರುವ ಬಗ್ಗೆ ಸಂಶಯದ ಮೇರೆಗೆ ಆತನನ್ನು ಬಂಧಿಸಿದ್ದಾರೆ .

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!