Sunday, June 7, 2026
Homeಕರಾವಳಿರಾಷ್ಟ್ರೀಯ ಹೆದ್ದಾರಿಯಲ್ಲಿ ಈಚಲು ಮರವನ್ನು ಕೆಡವಿದ ಕಾಡಾನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚಲು ಮರವನ್ನು ಕೆಡವಿದ ಕಾಡಾನೆ

- Advertisement -
- Advertisement -

ಬೆಳ್ತಂಗಡಿ: ಕಾಡಾನೆಯ ರಾದ್ಧಾಂತಕ್ಕೆ ಈಚಲು ಮರವೊಂದು ಈಚಲು ಮರ ಉರುಳಿ ವಿದ್ಯುತ್‌ ಲೈನಿನ ಮೇಲೆ ಸಂಪರ್ಕ ಕಡಿತವಾದ ಘಟನೆ ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪದ ಉಜಿರೆ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೊಳಿಯಾರು ಸಮೀಪ ರಸ್ತೆಬದಿಯಲ್ಲಿದ್ದ ದೊಡ್ಡ ಈಚಲು ಮರವನ್ನು ಕಾಡಾನೆ ನೆಲಕ್ಕೆ ಉರುಳಿಸಿದೆ.

ಮರ ಧರ್ಮಸ್ಥಳ-ಶಿಶಿಲ 11 ಕೆ.ವಿ ವಿದ್ಯುತ್‌ ಲೈನಿನ ಮೇಲೆ ಬಿದ್ದಿದ್ದು ವಿದ್ಯುತ್‌ ಲೈನ್‌ ತುಂಡಾಗಿದೆ. ಮೂರು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಇದರ ಸಮೀಪದ ಸ್ಥಳೀಯ ಸಂಪರ್ಕ ನೀಡುವ ವಿದ್ಯುತ್‌ ಲೈನಿಗೂ ಹಾನಿ ಸಂಭವಿಸಿದೆ. ಸ್ವಲ್ಪ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತು ಎನ್ನಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂನವರು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದರು.

- Advertisement -

Latest News

error: Content is protected !!