- Advertisement -
- Advertisement -
ಚಿಕ್ಕಮಗಳೂರು: ಮನೆಗಳ ಮೇಲೆ ಮುಸ್ಲಿಂ ಯುವಕರು ಕಲ್ಲು ಕೂರಿದ ಘಟನೆ ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ನಡೆದಿದೆ.
ನಿನ್ನೆ ಉಪವಾಸದ ಹಬ್ಬ ಮುಗಿಸಿ ಹಿಂದೂ ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ಮಾಡಲಾಗಿದೆ ಎನ್ನಲಾಗಿದೆ.ನಗರದ ವಿಜಯಪುರ ಬಡಾವಣೆಯಲ್ಲಿರುವ ಕೆಲ ಮನೆಗಳ ಮೇಲೆ ಕಲ್ಲು ತೂರಲಾಗಿದೆ.ಮನೆಯ ಕಿಟಕಿಯ ಗಾಜು ಪುಡಿ ಪುಡಿ, ಕಲ್ಲುಗಳು ಮನೆಯ ಒಳಗೆ ಬಂದು ಬಿದ್ದಿವೆ.
ಕಲ್ಲು ತೂರಿ, ಘೋಷಣೆ ಕೂಗಿ ಮುಸ್ಲಿಂ ಯುವಕರು ಪರಾರಿಯಾಗಿದ್ದಾರೆ.ಮಹೇಶ್ ಎನ್ನುವರ ಮನೆ ಮೇಲೆ ತಡ ರಾತ್ರಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಮನೆ ಮಾಲೀಕರಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.ಬಸವನಹಳ್ಳಿ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆದಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾದಿದ್ದಾರೆ.ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -