Wednesday, June 3, 2026
Homeತಾಜಾ ಸುದ್ದಿಬಯಲು ಶೌಚಾಲಯಕ್ಕೆ ತೆರಳಿದ ಮಹಿಳೆ ಮೇಲೆ ಗೊತ್ತಿಲ್ಲದೇ ಮಣ್ಣು ಸುರಿದ ಜೆಸಿಬಿ ಚಾಲಕ; ಮಹಿಳೆ ಸ್ಥಳದಲ್ಲೇ...

ಬಯಲು ಶೌಚಾಲಯಕ್ಕೆ ತೆರಳಿದ ಮಹಿಳೆ ಮೇಲೆ ಗೊತ್ತಿಲ್ಲದೇ ಮಣ್ಣು ಸುರಿದ ಜೆಸಿಬಿ ಚಾಲಕ; ಮಹಿಳೆ ಸ್ಥಳದಲ್ಲೇ ಸಾವು

- Advertisement -
- Advertisement -

ರಾಯಚೂರು : ಬಯಲು ಶೌಚಾಲಯಕ್ಕೆ ತೆರಳಿದ ಮಹಿಳೆ ಮೇಲೆ ಗೊತ್ತಿಲ್ಲದೇ ಜೆಸಿಬಿ ಚಾಲಕ ಗೊತ್ತಿಲ್ಲದೇ ಮಣ್ಣು ಸುರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ನಡೆದಿದೆ. ತಾಯಮ್ಮ(32) ಮೃತ ಮಹಿಳೆ.

ತಾಯಮ್ಮ ಬಯಲು ಶೌಚಕ್ಕೆಂದು ಖಾಲಿ ನಿವೇಶನದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿ ನಿವೇಶನ ಸ್ವಚ್ಛಗೊಳಿಸುತ್ತಿದ್ದ  ಜೆಸಿಬಿ ಚಾಲಕ ಗೊತ್ತಿಲ್ಲದೇ ಮಣ್ಣನ್ನು ತಾಯಮ್ಮನ ಮೇಲೆ ಸುರಿದಿದ್ದಾನೆ. ಪರಿಣಾಮ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.  

ಘಟನೆಯ ವಿಷಯ ತಿಳಿದ ಪೊಲೀಸರು ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದಿದ್ದು, ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ.

- Advertisement -

Latest News

error: Content is protected !!