Friday, June 5, 2026
Homeಕರಾವಳಿಉಡುಪಿಸಿದ್ದರಾಮೋತ್ಸವದಲ್ಲಿ ಗಮನ ಸೆಳೆದ ಉಡುಪಿಯ ಹುಲಿಯಾ: ಕರಾವಳಿಯ ಹುಲಿವೇಷ ತಂಡಕ್ಕೆ ಭಾರೀ ಮೆಚ್ಚುಗೆ

ಸಿದ್ದರಾಮೋತ್ಸವದಲ್ಲಿ ಗಮನ ಸೆಳೆದ ಉಡುಪಿಯ ಹುಲಿಯಾ: ಕರಾವಳಿಯ ಹುಲಿವೇಷ ತಂಡಕ್ಕೆ ಭಾರೀ ಮೆಚ್ಚುಗೆ

- Advertisement -
- Advertisement -

ದಾವಣಗೆರೆ: ನಿನ್ನೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಹೌದು ಹುಲಿಯಾ ಕಲರವ ಮೊಳಗಿತ್ತು.. ಸಮಾವೇಶದಲ್ಲಿ ಭಾಗಿಯಾಗಿದ್ದ ಕರಾವಳಿಯ ಹುಲಿವೇಷಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ವೇಷಧಾರಿಗಳು ಹೋದಲ್ಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೌದು ಹುಲಿಯಾ ಎಂದು ಚಿಯರ್ ಅಪ್ ಮಾಡಿದ್ದಾರೆ. ಕಿನ್ನಿ ಮೂಲ್ಕಿಯ ಹುಲಿ ವೇಷ ತಂಡ ಎಲ್ಲರ ಮೆಚ್ಚುಗೆ ಪಡೆದಿದೆ.

ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಏಳು ಮಂದಿ ಹುಲಿವೇಷಧಾರಿಗಳ ತಂಡ ದಾವಣಗೆರೆಗೆ ತೆರಳಿತ್ತು. ಹುಲಿ ವೇಷಧಾರಿಯೊಬ್ಬರ ಹೊಟ್ಟೆಯ ಮೇಲೆ ಸಿದ್ದರಾಮಯ್ಯ ಅವರ ಭಾವಚಿತ್ರದ ಪಡಿಯಚ್ಚು ಮೂಡಿಸಲಾಗಿತ್ತು. ಈ ಹುಲಿವೇಷಧಾರಿಗಳು ಕಾಂಗ್ರೆಸ್ ಕಾರ್ಯಕರ್ತರ ಮೆಚ್ಚುಗೆ ಪಡೆದರು. ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಅವರನ್ನು ಹೌದು ಹುಲಿಯ ಎಂದು ಕರೆಯುವ ಮೂಲಕ, ಈ ಘೋಷಣೆ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಉಡುಪಿಯ ಹುಲಿವೇಷಗಳನ್ನು ಕಂಡು ದಾವಣಗೆರೆಯಲ್ಲಿ ಸೇರಿದ್ದ ಲಕ್ಷಾಂತರ ಕಾರ್ಯಕರ್ತರು ಹೌದು ಹುಲಿಯಾ.. ಎಂದು ಘೋಷಣೆಗಳನ್ನು ಕೂಗಿದ್ದಾರೆ.

- Advertisement -

Latest News

error: Content is protected !!