Wednesday, June 24, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲೊಂದು ಹೃದಯವಿದ್ರಾವಕ ಘಟನೆ: ಮಗನ ಸಾವಿನ ನೋವಿನಿಂದ ಹೊರ ಬರಲಾರದೆ ದಂಪತಿ ಆತ್ಮಹತ್ಯೆಗೆ ಶರಣು

ಕಾಸರಗೋಡಿನಲ್ಲೊಂದು ಹೃದಯವಿದ್ರಾವಕ ಘಟನೆ: ಮಗನ ಸಾವಿನ ನೋವಿನಿಂದ ಹೊರ ಬರಲಾರದೆ ದಂಪತಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಾಸರಗೋಡಿನ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮಗನ ಸಾವಿನ ನೋವಿನಿಂದ ಹೊರ ಬರಲಾರದೆ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಖ್ಯಾತ ಉದ್ಯಮಿ  ಪರಂಬದ ವೇಣುಗೋಪಾಲನ್ ನಾಯರ್ (50) ಮತ್ತು ಅವರ ಪತ್ನಿ ಸ್ಮಿತಾ (42) ಮೃತರು.

ಕಳೆದ ಡಿಸೆಂಬರ್ 29ರಂದು ಬೇಕಲ್ ಬೀಚ್ ಉತ್ಸವದ ಸಂದರ್ಭದಲ್ಲಿ ನಡೆದ ರೈಲು ಅಪಘಾತದಲ್ಲಿ ಇವರ ದಂಪತಿಯ ಏಕೈಕ ಪುತ್ರ, ಮಂಗಳೂರಿನ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಎಂ. ಶಿವಾನಂದನ್ (19) ಮೃತಪಟ್ಟಿದ್ದರು. ರ‍್ಯಾಪರ್ ವೇದನ್ ಅವರ ಸಂಗೀತ ಕಚೇರಿಗೆ ಹೋಗಲು ರೈಲ್ವೇ ಟ್ರ್ಯಾಕ್ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಶಿವಾನಂದನ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸಾವನ್ನಪ್ಪಿದ್ದರು. ಇದೇ ನೋವಿನಲ್ಲಿ ದಂಪತಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇನ್ನು ಆತ್ಮಹತ್ಯೆಗೆ ಶರಣಾಗುವ ಸ್ಮಿತಾ ಅವರು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಗನ ಬಾಲ್ಯದಿಂದ ಹಿಡಿದು ಬೆಳೆದ ವರ್ಷಗಳವರೆಗಿನ ಫೋಟೋಗಳ ವೀಡಿಯೊ ಮಾಡಿ ಹಂಚಿಕೊಂಡಿದ್ದರು. ವೇಣುಗೋಪಾಲನ್ ಅವರು ಯಶಸ್ವಿ ಉದ್ಯಮಿಯಾಗಿದ್ದರೂ, ಮಗನ ಸಾವಿನ ನಂತರ ದಂಪತಿಗಳು ಸಾಮಾಜಿಕ ಜೀವನದಿಂದ ದೂರ ಉಳಿದಿದ್ದರು. ಸ್ಥಳೀಯರು ಮತ್ತು ಕುಟುಂಬ ಅವರಿಗೆ ಕೌನ್ಸಲಿಂಗ್ ನೀಡಲು ಪ್ರಯತ್ನಿಸಿತ್ತು. ಪ್ರತಿದಿನ ರಾತ್ರಿ ಒಬ್ಬ ಸಂಬಂಧಿಕರು ಅವರ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ, ಗುರುವಾರ ರಾತ್ರಿ ದಂಪತಿ  ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!