- Advertisement -
- Advertisement -
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳುವಂತಹ ಘಟನೆ ವರದಿಯಾಗಿದೆ. ಹಾಡಹಗಲೇ ಪಿಗ್ಮಿ ಕಲೆಕ್ಟರ್ ಮೇಲೆ ಡ್ರ್ಯಾಗರ್ ನಿಂದ ಹಲ್ಲೆಗೆ ಯತ್ನಿಸಲಾಗಿದೆ.
ರೆಡ್ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಕಳ್ಳರು ಉತ್ತರಹಳ್ಳಿಯಲ್ಲಿ ಬಾಲಾಜಿ ಬಾರ್ ನಲ್ಲಿ ಹಣ ಪಡೆದು, ಹೊರಟಿದ್ದಂತ ಪಿಗ್ಮಿ ಕಲೆಕ್ಟರ್ ವರದರಾಜ್ ಮೇಲೆ ದಾಳಿ ಮಾಡಿದ್ದಾರೆ. ದರೋಡೆ ಕೋರರ ಗ್ಯಾಂಗ್ ಒಂದು ಡ್ರ್ಯಾಗರ್ ನಿಂದ ಹಲ್ಲೆ ಮಾಡಿ, ಹಣ ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -