Thursday, June 4, 2026
HomeUncategorizedಬೆಳ್ತಂಗಡಿ ಇನ್ನೋವಾ ಕಾರಿನಲ್ಲಿ ದನ ಸಾಗಿಸಲು ಯತ್ನ: ಬಜರಂಗದಳದಿಂದ‌ ದಾಳಿ ಸಂದರ್ಭ ಕಾರು ಪಲ್ಟಿ

ಬೆಳ್ತಂಗಡಿ ಇನ್ನೋವಾ ಕಾರಿನಲ್ಲಿ ದನ ಸಾಗಿಸಲು ಯತ್ನ: ಬಜರಂಗದಳದಿಂದ‌ ದಾಳಿ ಸಂದರ್ಭ ಕಾರು ಪಲ್ಟಿ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಉಜಿರೆ ಸುರ್ಯಪಡ್ಪು ಎಂಬಲ್ಲಿ ಕಸಾಯಿಖಾನೆಗೆ ಇನ್ನೋವಾ ಕಾರಿನಲ್ಲಿ ನಾಲ್ಕು ದನಗಳನ್ನು ಅಕ್ರಮವಾಗಿ‌ ಸಾಗಿಸುತ್ತಿದ್ದ ಘಟನೆ ನಡೆದಿದೆ. ಗೋಕಳ್ಳತನ ಮಾಡಿ ಇನ್ನೋವ ಕಾರಿನಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುವಾಗ ಬಜರಂಗದಳ ಕಾರ್ಯಕರ್ತರು ಗಾಡಿಯನ್ನು ತಡೆಯಲು ಮುಂದಾದಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಕಾರಿ‌ನಲ್ಲಿದ್ದ ನಾಲ್ಕು ದನಗಳನ್ನು ರಕ್ಷಣೆ ಮಾಡಲಾಗಿದೆ. ಬಜರಂಗದಳದ ಕಾರ್ಯಕರ್ತರು ಹಾಗೂ ಊರಿನವರು ಸೇರಿ ಗೋವನ್ನು ಪೊಲೀಸರಿಗೆ ಒಪ್ಪಿಸಿದರು. ಕಾರಿನಲ್ಲಿದ್ದ ದನದ ಬ್ರೋಕರ್ ಶೇಖರ್ ಸುರ್ಯ ಸೇರಿ ಮೂರು ಮಂದಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!