Sunday, May 19, 2024
Homeಕರಾವಳಿಜಿಲ್ಲೆಯ ಮೊದಲ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲು ಉಳ್ಳಾಲ ನಗರಸಭೆಯೊಂದಿಗೆ ಹಸಿರುದಳ, ಎಪಿಡಿ ಫೌಂಡೇಶನ್...

ಜಿಲ್ಲೆಯ ಮೊದಲ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲು ಉಳ್ಳಾಲ ನಗರಸಭೆಯೊಂದಿಗೆ ಹಸಿರುದಳ, ಎಪಿಡಿ ಫೌಂಡೇಶನ್ ಒಪ್ಪಂದ

spot_img
- Advertisement -
- Advertisement -

ಮಂಗಳೂರು: ನವೀನ ಯೋಜನೆಯೊಂದರಲ್ಲಿ ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನ ಉಳ್ಳಾಲದಲ್ಲಿ ಜಿಲ್ಲೆಯ ಮೊದಲ ಒಣ ತ್ಯಾಜ್ಯ ಸಂಗ್ರಹ ಕೇಂದ್ರವನ್ನು (ಡಿಡಬ್ಲ್ಯೂಸಿಸಿ) ಸ್ಥಾಪಿಸಲು ಉಳ್ಳಾಲ ನಗರ ಸಭೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಉಳ್ಳಾಲ ನಗರ ಸಭೆಯ ಆಯುಕ್ತರಾದ ಶ್ರೀ ರಾಯಪ್ಪ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಎಂಒಯುನ ಷರತ್ತುಗಳ ಪ್ರಕಾರ, ಶ್ರೀ ಮೊಹಮ್ಮದ್ ನವಾಜುದ್ದೀನ್ ಎಂಬ ತ್ಯಾಜ್ಯ ವಿಂಗಡಕ (ಸಾರ್ಟರ್) ಅನ್ನು ಆಪರೇಟರ್' (ನಿರ್ವಾಹಕ) ಎಂದು ಗುರುತಿಸಲಾಗಿದೆ ಮತ್ತು ಹಸಿರುದಳ / ಎಪಿಡಿ ಪ್ರತಿಷ್ಠಾನ ಯೋಜನೆಯಫೆಸಿಲಿಟೇಟಸರ್ (ಸಂಯೋಜಕ) ಎಂದು ಗುರುತಿಸಲಾಗಿದೆ.

ಒಪ್ಪಂದದ ಪ್ರಕಾರ, ಉಳ್ಳಾಲ ನಗರ ಸಭೆ ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯವನ್ನು ಸಂಗ್ರಹಿಸಲು, ಸಂಸ್ಕರಿಸಲು ಮತ್ತು ಸಂಗ್ರಹಿಸಲು ಭೌತಿಕ ಮೂಲಸೌಕರ್ಯವನ್ನು ಒದಗಿಸಲಿದೆ. ಹಸಿರುದಳ / ಎಪಿಡಿ ಪ್ರತಿಷ್ಠಾನ ತಾಂತ್ರಿಕತೆಯನ್ನು ಒದಗಿಸುತ್ತದೆ ಮತ್ತು ಯೋಜನೆಯ ತರಬೇತಿ ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳುತ್ತದೆ. ಶ್ರೀ ಮೊಹಮ್ಮದ್ ನವಾಜುದ್ದೀನ್ ಮತ್ತು ಅವರ ಇಬ್ಬರು ತ್ಯಾಜ್ಯ ವಿಂಗಡಕರ ತಂಡವು ಡಿಡಬ್ಲ್ಯೂಸಿಸಿ ಘಟಕದ ದಿನನಿತ್ಯದ ವ್ಯವಹಾರವನ್ನು ನಿರ್ವಹಿಸಲಿದೆ. ಡಿಡಬ್ಲ್ಯೂಸಿಸಿ ಘಟಕವು ಅಕ್ಟೋಬರ್ 2, 2020 ರಿಂದ ಉಳ್ಳಾಲದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಒಪ್ಪಂದವು ಮೂರು ವರ್ಷಗಳ ಅವಧಿಗೆ ಅನ್ವಯಿಸಲಿದೆ ಮತ್ತು ನಂತರ ಅದನ್ನು ನವೀಕರಿಸಬಹುದಾಗಿದೆ.

ಡಿಡಬ್ಲ್ಯೂಸಿಸಿ ಪರಿಕಲ್ಪನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ. ಉಳ್ಳಾಲ ನಗರ ದಿನಕ್ಕೆ 18 ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತಿದೆೆ, ಅದರಲ್ಲಿ ಸುಮಾರು 4-5 ಟನ್ ಒಣ ತ್ಯಾಜ್ಯ. ಉಳ್ಳಾಲ ನಗರ ಸಭೆಯೊಂದಿಗೆ 10 ತಿಂಗಳ ಕಾಲ ಅಧ್ಯಯನ ಮಾಡಿದ ನಂತರ ಮತ್ತು ಉಳ್ಳಾಲದ ಪ್ರಸ್ತುತ ಘನತ್ಯಾಜ್ಯ ನಿರ್ವಹಣೆ (ಎಸ್ಡಬ್ಲ್ಯುಎಂ) ಅನ್ನು ಅರ್ಥಮಾಡಿಕೊಂಡ ನಂತರ ಹಸಿರುದಳ / ಎಪಿಡಿ ಪ್ರತಿಷ್ಠಾನ ಡಿಡಬ್ಲ್ಯೂಸಿಸಿ ಯೋಜನೆಯನ್ನು ಸಿದ್ಧಪಡಿಸಿದೆೆ. ಉಳ್ಳಾಲದಲ್ಲಿರುವ ತ್ಯಾಜ್ಯ ಸಂಗ್ರಹಿಸುವವರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆ ನಡೆಸಲಾಯಿತು. ತ್ಯಾಜ್ಯ ಸಂಗ್ರಹಕಾರರಿಗೆ ಗುರುತಿನ ಚೀಟಿ ನೀಡಲಾಯಿತು. ಈ ತ್ಯಾಜ್ಯ ಸಂಗ್ರಹಕಾರರು ಡಿಡಬ್ಲ್ಯೂಸಿಸಿ ಕೇಂದ್ರವನ್ನು ನಿರ್ವಹಿಸಲಿದ್ದಾರೆ. ಸಂಗ್ರಹಿಸಿದ ಒಣ ತ್ಯಾಜ್ಯವನ್ನು ಮರುಬಳಕೆದಾರರಿಗೆ ಕಳುಹಿಸಲಾಗುತ್ತದೆ. ಮರುಬಳಕೆ ಮಾಡಬಹುದಾದ ತ್ಯಾಜ್ಯದ ಮಾರಾಟದಿಂದ ಬರುವ ಆದಾಯದಿಂದ ತ್ಯಾಜ್ಯ ಸಂಗ್ರಹಕಾರರು ಮತ್ತು ಆಯೋಜಕರು ತಮ್ಮ ಗಳಿಕೆಯನ್ನು ಪಡೆಯುತ್ತಾರೆ. ಉತ್ಪತ್ತಿಯಾದ ಹೆಚ್ಚುವರಿಯನ್ನು ಡಿಡಬ್ಲ್ಯೂಸಿಸಿ ಕೇಂದ್ರದ ವಿಸ್ತರಣೆಗಾಗಿ ಮರುಹೂಡಿಕೆ ಮಾಡಲಾಗುತ್ತದೆ.

ತ್ಯಾಜ್ಯ ನಿರ್ವಹಣೆಗೆ ಜನ ಪರವಾದ ವಿಧಾನದಲ್ಲಿ ತನ್ನ ಪರಿಣತಿಯನ್ನು ಕರಾವಳಿ ಪ್ರದೇಶದಲ್ಲಿ ವಿಸ್ತರಿಸಲು 2019 ರಿಂದ ಮಂಗಳೂರು ಮೂಲದ ಎಪಿಡಿ ಪ್ರತಿಷ್ಠಾನದೊಂದಿಗಿರುವ ಹಸಿರುದಳ ಅವರ ಸಹಭಾಗಿತ್ವವನ್ನು ಈ ಯೋಜನೆಯು ಮುಂದುವಸಲಿದೆ. “ಈ ನವೀನ ಯೋಜನೆಯನ್ನು ಜಾರಿಗೆ ತರಲು ಉಳ್ಳಾಲ ನಗರ ಸಭೆಯೊಂದಿಗೆ ಪಾಲುದಾರರಾಗಲು ಎಪಿಡಿ ಪ್ರತಿಷ್ಠಾನ ಮತ್ತು ಹಸಿರುದಳ ಹೆಮ್ಮೆಪಡುತ್ತಿದೆ. ಇದು ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ, ತ್ಯಾಜ್ಯವನ್ನು ಸಂಗ್ರಹಿಸುವವರ ಜೀವನ ಸುದಾರಿಸುತ್ತದೆ ಮತ್ತು ಪರಿಸರ ಸ್ನೇಹಿಯಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತದೆ” ಎಂದು ಎಪಿಡಿ ಪ್ರತಿಷ್ಠಾನದ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಹೇಳಿದರು. “ಉಳ್ಳಾಲ ನಗರ ಸಭೆಯ ಆಯುಕ್ತರಾದ ಶ್ರೀ ರಾಯಪ್ಪ, ಆರೋಗ್ಯ ಅಧಿಕಾರಿಗಳು ಮತ್ತು ಪರಿಸರ ಎಂಜಿನಿಯರ್ ಡಿಡಬ್ಲ್ಯೂಸಿಸಿ ಸ್ಥಾಪನೆಗೆ ಬಹಳ ಸಹಕಾರ ನೀಡಿದ್ದಾರೆ. ಅವರಿಗೆ ನಾವು ಆಭಾರಿಯಾಗಿದ್ದೇವೆ.” ಎಂದರು. ಎಂಒಯುಗೆ ಸಹಿ ಹಾಕುವಾಗ ವಾಣಿಶ್ರೀ ಬಿ. ಆರ್. ಹಸಿರುದಳ / ಎಪಿಡಿ ಪ್ರತಿಷ್ಠಾನವನ್ನು ಪ್ರತಿನಿಧಿಸಿದರು.

ಹಿನ್ನೆಲೆ ಟಿಪ್ಪಣಿ

ಈ ಯೋಜನೆಯು 2013-2014 ರಿಂದ ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಡಿಡಬ್ಲ್ಯೂಸಿಸಿಗಳ ಮಾದರಿಯನ್ನು ಆಧರಿಸಿದೆ. ವಿವಿಧ ನಾಗರಿಕ ಸಂಘಟನೆಗಳು ಮತ್ತು ಎನ್ಜಿಒಗಳ ಸಹಯೋಗದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ವಿಕೇಂದ್ರೀಕೃತ ರೀತಿಯಲ್ಲಿ ಪ್ರತಿ ವಾಡರ್್ಗೆ ಒಂದು ಎಂಬಂತೆ ಸುಮಾರು 166 ಡಿಡಬ್ಲ್ಯೂಸಿಸಿಗಳು (ಮಂಜೂರಾದ 198 ರಲ್ಲಿ) ಕಾರ್ಯನಿರ್ವಹಿಸುತ್ತಿವೆ.

ಈ ಡಿಡಬ್ಲ್ಯೂಸಿಸಿಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಬಿಬಿಎಂಪಿ ಪರವಾಗಿ ನಿರ್ವಹಿಸುವ ವಿವಿಧ ಗುತ್ತಿಗೆದಾರರು ಮತ್ತು ಏಜೆನ್ಸಿಗಳಿಗೆ ನೀಡಲಾಗಿದೆ. ಒಣ ತ್ಯಾಜ್ಯವನ್ನು ಸಂಗ್ರಹಿಸುವುದು, ವಿಂಗಡಿಸುವುದು, ತಿರಸ್ಕರಿಸುವುದು ಇತ್ಯಾದಿಗಳ ಅಗತ್ಯ ಕಾರ್ಯಗಳನ್ನು ಅವರು ನಿರ್ವಹಿಸುತ್ತಾರೆ ಮತ್ತು ಮುಂದಕ್ಕೆ ರವಾನಿಸುತ್ತಾರೆ.

ಹಸಿರುದಳ ಪ್ರಸ್ತುತ ಬೆಂಗಳೂರಿನಲ್ಲಿ 33 ಡಿಡಬ್ಲ್ಯೂಸಿಸಿಗಳನ್ನು ನಿರ್ವಹಿಸುತ್ತಿದೆೆ. ತ್ಯಾಜ್ಯ ಸಂಗ್ರಹಿಸುವವರ ಜೀವನವನ್ನು ಉತ್ತಮಗೊಳಿಸುವ ಉದ್ದೇಶದಿಂದ ಹಸಿರುದಳವನ್ನು ನಳಿನಿ ಶೇಖರ್ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು. ತ್ಯಾಜ್ಯ ಸಂಗ್ರಾಹಕ-ಉದ್ಯಮಿಗಳೊಂದಿಗೆ ಕೆಲಸ ಮಾಡುವ ತನ್ನ ದೀರ್ಘಕಾಲದ ತಳಮಟ್ಟದ ಅನುಭವವನ್ನು ಬಳಸಿಕೊಂಡು, ಹಸಿರುದಳ ಅವರು ತರಬೇತಿ, ಪ್ರೋತ್ಸಾಹ / ಬೆಂಬಲ ಮತ್ತು ಬಿಬಿಎಂಪಿಗೆ ಅಗತ್ಯವಿರುವ ವರದಿ, ನಿಯಂತ್ರಕ ಮತ್ತು ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವಂತಹ ಕಾರ್ಯಾಚರಣೆಯಲ್ಲಿ ಸಹಾಯವನ್ನು ಒದಗಿಸುತ್ತಾರೆ.

ಪ್ರತಿ ಡಿಡಬ್ಲ್ಯೂಸಿಸಿಯಲ್ಲಿ ಒಳಬರುವ / ಹೊರಹೋಗುವ ತ್ಯಾಜ್ಯದ ಹರಿವನ್ನು ಪತ್ತೆಹಚ್ಚಲು, ಬಿಬಿಎಂಪಿ ಅಥವಾ ಇತರ ಸಹಯೋಗಿಗಳಿಗೆ (ಯುಎನ್ಡಿಪಿ ಯಂತಹ) ಅಗತ್ಯವಿರುವ ವಿವಿಧ ವರದಿಗಳನ್ನು ಉತ್ಪಾದಿಸಲು ಮತ್ತು ಈ ಡೇಟಾದಿಂದ ಪರಿಮಾಣಾತ್ಮಕ ಒಳನೋಟಗಳನ್ನು ಪಡೆಯಲು ಹಸಿರುದಳ ವಿಶಿಷ್ಟ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ

- Advertisement -
spot_img

Latest News

error: Content is protected !!