Tuesday, April 30, 2024
Homeಕರಾವಳಿಬಂಟ್ವಾಳ: ಕೊರಗಜ್ಜನ ಮಹಿಮೆಯಿಂದ ಗುಣಮುಖನಾದ ವಿದೇಶಿ ಬಾಲಕ: ಕೊರಗಜ್ಜನಿಗೆ ಅಗೇಲು ಸೇವೆ ಸಲ್ಲಿಸಿದ ಉಕ್ರೇನ್‌ ಕುಟುಂಬ

ಬಂಟ್ವಾಳ: ಕೊರಗಜ್ಜನ ಮಹಿಮೆಯಿಂದ ಗುಣಮುಖನಾದ ವಿದೇಶಿ ಬಾಲಕ: ಕೊರಗಜ್ಜನಿಗೆ ಅಗೇಲು ಸೇವೆ ಸಲ್ಲಿಸಿದ ಉಕ್ರೇನ್‌ ಕುಟುಂಬ

spot_img
- Advertisement -
- Advertisement -

ಬಂಟ್ವಾಳ: ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರಿಯ ದೈವ. ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ ಮೊದಲು ಹರಕೆ  ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ ಹರಕೆ ಈಡೇರಿದ್ದೂ ಇದೆ. ಹಾಗಾಗಿ ಕೊರಗಜ್ಜನ ಪವಾಡವನ್ನು ಹಲವರು ನಂಬುತ್ತಾರೆ. ಅಂತೆಯೇ ಉಕ್ರೇನ್ ನ ಕುಟುಂಬವೊಂದು ಶುಕ್ರವಾರ ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ.

ಕಳೆದ ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಆದ್ರೆ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದರಲ್ಲದೆ, ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಇದೀಗ ಮ್ಯಾಕ್ಸಿಂ ಸಂಪೂರ್ಣ ಗುಣಮುಖನಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ.

- Advertisement -
spot_img

Latest News

error: Content is protected !!