Wednesday, June 3, 2026
Homeಕರಾವಳಿಮಂಗಳೂರು; ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಮಂಗಳೂರು; ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

- Advertisement -
- Advertisement -

ಮಂಗಳೂರು: ಊಟ ಮಾಡಿದ ತಟ್ಟೆ ತೊಳೆಯುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಪೋಸ್ಟಲ್ ಗಾರ್ಡ್ ಸೈಟ್ ನಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ಸಂಜಯ್ ಮೃತ ಯುವಕ. ಸಂಜಯ್ ಮತ್ತು ಸೋಹಾನ್ ಯಾದವ್ ಎಂಬಿಬ್ಬರ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ ನಡೆದಿದ್ದು, ಸೋಹನ್ ಯಾದವ್ ಸಂಜಯ್ ನನ್ನು ಬಲವಾಗಿ ಹಿಂದಕ್ಕೆ ತಳ್ಳಿದ್ದ. ಈ ವೇಳೆ ಕೆಳಗೆ ಬಿದ್ದ ಸಂಜಯ್ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ‌

- Advertisement -

Latest News

error: Content is protected !!