Monday, June 8, 2026
Homeಕರಾವಳಿಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಕೃಷಿಕ ಸಾವು..!

ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಕೃಷಿಕ ಸಾವು..!

- Advertisement -
- Advertisement -

ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಗತಿಪರ ಕೃಷಿಕರೊಬ್ಬರು ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮರೋಡಿ ಗ್ರಾಮದ ಕಿಂಜಾಲು ಮನೆಯ ಶೇಖರ್ ಪೂಜಾರಿ (52) ಎಂದು ಗುರುತಿಸಲಾಗಿದೆ.

ಪ್ರಗತಿಪರ ಕೃಷಿಕರಾಗಿದ್ದ ಶೇಖರ್ ಪೂಜಾರಿಯವರು ಡಿ.11 ರಂದು ತಮ್ಮ ತೋಟದಲ್ಲಿ ಅಡಿಕೆ ಮರದಿಂದ ಅಡಿಕೆ ತಗೆಯುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಅವರ ತಲೆಗೆ ಹಾಗೂ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಡಿ.26 ರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!