Sunday, June 7, 2026
Homeಕರಾವಳಿಮಂಗಳೂರು : ಕಂಬಳ, ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ- ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ...

ಮಂಗಳೂರು : ಕಂಬಳ, ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ- ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ದಕ್ಷಿಣಕನ್ನಡ ಡಿ.ಸಿ ಸೂಚನೆ

- Advertisement -
- Advertisement -

ಮಂಗಳೂರು : ಓಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರಕಾರದ ಆದೇಶವು ಕರಾವಳಿಯಲ್ಲಿ ನಡೆಯುವ ಯಕ್ಷಗಾನ ಹಾಗೂ ಕಂಬಳಕ್ಕೂ ಅನ್ವಯಿಸಲಿದೆ ಎಂಬಯದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.

ನೈಟ್‌ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಕಂಬಳ, ಯಕ್ಷಗಾನ ಸೇರಿದಂತೆ ರಾತ್ರಿ ನಡೆಯುವಂತಹ ಕಾರ್ಯಕ್ರಮಗಳನ್ನು 10 ಗಂಟೆಯೊಳಗೆ ಮುಗಿಸಬೇಕು, ಇದರಲ್ಲಿ ಯಾವುದೇ ರಿಯಾಯಿತಿಯು ಇರುವುದಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.

ಇಂದು ಈ ಕುರಿತು ಸಭೆಯನ್ನು ನಡೆಸಿ ಆಯೋಜಕರ ಜತೆಗೆ ಚರ್ಚಿಸಲಾಗುವುದು. ನೈಟ್‌ ಕರ್ಫ್ಯೂ ಅವಧಿ ಆರಂಭಕ್ಕೂ ಮೊದಲೇ ಎಲ್ಲ ಕಾರ್ಯಕ್ರಮ ಮುಗಿಸುವಂತೆ ಸಮಬಂಧಪಟ್ಟವರಿಗೆ ಸೂಚನೆಗಳನ್ನು ನೀಡಲಾಗುವುದು. ಓಮೀಕ್ರಾನ್ ಹೆಚ್ಚುತ್ತಿರುವ ಕಾರಣ ಸರ್ಕಾರವು ಕಟ್ಟೆಚ್ಚರದ ನಿಯಾಮಾವಳಿಗಳನ್ನು ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೆ ನೈಟ್‌ ಕರ್ಫ್ಯೂ ಅವಧಿಯಲ್ಲಿ ನಿಯಮಗಳನ್ನು ಸಡಿಲಗೊಳಿಸಲು ಆಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ರಾತ್ರಿ ವೇಳೆಗೆ ನಡೆಯುವಂತಹ ಯಕ್ಷಗಾನ, ಕಂಬಳಗಳನ್ನು ಬೇಗನೆ ಆರಂಭಿಸಿ, ನೈಟ್‌ ಕರ್ಫ್ಯೂ ಅವಧಿ ಆರಂಭವಾಗುವುದರೊಳಗೆ ಮುಗಿಸಬೇಕು. ನೈಟ್‌ ಕರ್ಫ್ಯೂ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯ ಆಗುವುದರಿಂದ, ನಿಯಮಗಳನ್ನು ಸಡಿಲಗೊಳಿಸುವ ನಿರ್ಧಾರವೂ ಸರ್ಕಾರದ ಮಟ್ಟದಲ್ಲಿಯೇ ಆಗಬೇಕಾಗುತ್ತದೆ’ ಎಂಬುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!